ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ ಬಸವರಾಜು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ

By Staff
|
Google Oneindia Kannada News

Chitradurga will witness 75th Kannada Sahitya Sammelana
ಬೆಂಗಳೂರು, ಡಿ. 19 : ಚಿತ್ರದುರ್ಗದಲ್ಲಿ ಜ.29 ರಿಂದ ಫೆ. 1ರ ವರೆಗೆ ನಡೆಯಲಿರುವ 75 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಸಾಹಿತಿ ಡಾ ಎಲ್ ಬಸವರಾಜು ಅವರನ್ನು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸರ್ವಾನುಮತದಿಂದ ಆಯ್ಕೆ ಮಾಡಿತು.

ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಗಾಗಿ ಹಿರಿಯ ಸಂಶೋಧಕ ಎಂ ಚಿದಾನಂದಮೂರ್ತಿ ಹಾಗೂ ಲೇಖಕ ಬರಗೂರು ರಾಮಚಂದ್ರಪ್ಪ ಅವರ ಹೆಸರು ಕೇಳಿಬಂದಿತ್ತು. ಹಿರಿತನದ ಆಧಾರದ ಮೇಲೆ ಎಲ್ ಬಸವರಾಜು ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿಸಲು ತೀರ್ಮಾನಿಸಲಾಯಿತು ಎಂದು ಕಸಾಪ ಮೂಲಗಳು ತಿಳಿಸಿವೆ.

ಡಾ ಎಲ್ ಬಸವರಾಜು 1919 ಅಕ್ಟೋಬರ 5 ರಂದು ಕೋಲಾರ ಜಿಲ್ಲೆಯ ಎಡಗೂರು ಗ್ರಾಮದಲ್ಲಿ ಜನಿಸಿದರು. ಬಸವರಾಜು ವೃತ್ತಿಯಿಂದ ಪ್ರಾಧ್ಯಾಪಕರಾದರೂ, ತಮ್ಮ ಜೀವನದ ಬಹುಪಾಲು ಅವಧಿಯನ್ನು ಕನ್ನಡ ಕವಿ, ವೀರಶೈವ ಸಾಹಿತ್ಯ-ಸಿದ್ಧಾಂತಗಳ ಶೋಧನೆ, ಅಧ್ಯಯನ, ವ್ಯಾಖ್ಯಾನ, ಸಂಪಾದನೆಗಳಲ್ಲಿ ಕಳೆದಿದ್ದಾರೆ. ಸಹೃದಯಿ ಆಗಿರುವ ಅವರು ಅಪ್ಪಟ ಮಾನವತಾವಾದಿಯಾಗಿದ್ದಾರೆ.

ಬಸವರಾಜು ಅವರಿಗೆ ಪಂಪ ಪ್ರಶಸ್ತಿ, ಬಸವ ಪುರಸ್ಕಾರ (2005), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1994), ಕೇಂದ್ರ ಸಾಹಿತ್ಯ ಅಕಾಡೆಮಿಯ 2006ರ ಭಾಷಾ ಸಮ್ಮಾನ್ ಗೌರವ ಸಂದಿವೆ.

ಬಸವರಾಜು ಅವರ ಕೆಲವು ಪ್ರಮುಖ ಕೃತಿಗಳು:

* ಶೂನ್ಯ ಸಂಪಾದನೆ
* ಕನ್ನಡ ಛಂದಸ್ಸು
* ಶಿವದಾಸ ಗೀತಾಂಜಲಿ
* ಭಾಸನ ಭಾರತ ರೂಪಕ
* ನಾಟಕಾಮೃತ ಬಿಂದುಗಳು
* ಅಲ್ಲಮನ ವಚನಗಳು
* ದೇವರ ದಾಸೀಮಯ್ಯನ ವಚನಗಳು
* ಭಾಸರಾಮಾಯಣ
* ನಾಟಕ ತ್ರಿವೇಣಿ

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X