ಚಂದ್ರ ಕೊಚ್ಚಾರ್ ಐಸಿಐಸಿಐ ಬ್ಯಾಂಕ್ ಹೊಸ ಸಿಇಒ

ಆಡಳಿತ ಮಂಡಳಿಯ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿರುವ ಚಂದ್ರ ಕೊಚ್ಚಾರ್, ಕೆ ವಿ ಕಾಮತ್ ಅವರ ಮಾರ್ಗದರ್ಶನದಡಿಯಲ್ಲಿ ಬ್ಯಾಂಕ್ ನ ಏಳಿಗೆಗೆ ಅವಿರತವಾಗಿ ಶ್ರಮಿಸುವುದಾಗಿ ಹೇಳಿದರು ಹಾಗೂ ಬ್ಯಾಂಕ್ ನ ಶೇರುದಾರರ ಹಿತವನ್ನು ಕಾಪಾಡಿಕೊಂಡು ಬರುವುದಾಗಿ ಭರವಸೆ ನೀಡಿದರು.
ಚಂದ್ರ ಬ್ಯಾಂಕ್ ನ ಅವಭಾಜ್ಯ ಅಂಗ
1984 ರಲ್ಲಿ ಬ್ಯಾಂಕ್ ನಲ್ಲಿ ಟ್ರೈನಿ ಉದ್ಯೋಗಿಯಾಗಿ ಕೆಲಸ ಆರಂಭಿಸಿದ ಕೊಚ್ಚಾರ್, 1993ರಲ್ಲಿ ಕಂಪನಿಯ ವ್ಯವಹಾರಿಕ ಬ್ಯಾಂಕ್ ನ ತಂಡದ ಮುಖ್ಯಸ್ಥ ಸ್ಥಾನ ಪಡೆದರು. ನಂತರ ಇವರು ಏಪ್ರಿಲ್ 2006 ರಿಂದ ಕಂಪನಿಯ ಜಂಟಿ ಆಡಳಿತ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಫಾರ್ಚೂನ್ ತನ್ನ ನಿಯತಕಾಲಿಕದಲ್ಲಿ ಅವರನ್ನು ವಿಶ್ವದ ಅತ್ಯಂತ ಪ್ರಭಾವಿತ ವ್ಯವಹಾರಿಕ ಮಹಿಳೆ (Business Women) ಪಟ್ಟಿಯಲ್ಲೂ ಸೇರಿಸಿತ್ತು.
ಚಂದ್ರ ಕೊಚ್ಚಾರ್ ಶಾಲಾ ಕಾಲೇಜು ದಿನಗಳಿಂದಲೂ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದರು. ಶಾಲಾ ದಿನಗಳಲ್ಲಿ ಪ್ರತಿ ವರ್ಷ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಪಡೆಯುತ್ತಿದ್ದ ಜೋಧಪುರ್ ನ ಹುಡುಗಿ, ಮುಂದೆ ಪದವಿ ತರಗತಿಯಲ್ಲೂ ತನ್ನ ಶಾಣೆತನವನ್ನು ಮುಂದುವರೆಸಿದರು. ಹಣಕಾಸು ಮತ್ತು ಲೆಕ್ಕಶಾಸ್ತ್ರದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಮುಂಬೈನಲ್ಲಿ ಮುಗಿಸಿದರು. 1984 ರಲ್ಲಿ ಟ್ರೈನಿ ಉದ್ಯೋಗಿಯಾಗಿ ಐಸಿಐಸಿಐ ಬ್ಯಾಂಕ್ ಗೆ ಸೇರಿದ ಅವರು, ಮತ್ತೆ ಹಿಂತಿರುಗಿ ನೋಡಲಿಲ್ಲ.
ಅವರಲ್ಲಿನ ಜಾಣತನದಿಂದಾಗಿ 1993 ರಲ್ಲಿ ವ್ಯವಹಾರಿಕ ಬ್ಯಾಂಕ್ ಮುಖ್ಯಸ್ಥರನ್ನಾಗಿ ಮಾಡಲು ಆಡಳಿತ ಮಂಡಳಿ ನಿರ್ಧರಿಸಿತು. ಮಂಡಳಿ ನೀಡಿದ ಜವಾಬ್ದಾರಿಯನ್ನು ಚಂದ್ರ ಕೊಚ್ಚಾರ್ ಅಚ್ಚುಕಟ್ಟಾಗಿ ನಿರ್ವಹಿಸಿದ ಸೈ ಎನಿಸಿಕೊಂಡರು. ಬ್ಯಾಂಕ್ ಗೆ ಉತ್ತಮ ಹೆಸರನ್ನು ಸಹ ತಂದುಕೊಟ್ಟರು. ಹೀಗೆ ಬ್ಯಾಂಕ್ ನ ವಿವಿಧ ಹುದ್ದೆಗಳನ್ನು ನಿಭಾಯಿಸಿ ಇದೀಗ ಸಂಸ್ಥೆಯ ಸರ್ವೋನ್ನತ ಸ್ಥಾನವಾದ ಮುಖ್ಯಕಾರ್ಯನಿರ್ವಾಹಕ ಹುದ್ದೆಗೆ ನಿಯುಕ್ತಿ ಆಗಿರುವುದು ಸಾಧನೆಯೇ ಸರಿ.
(ಏಜೆನ್ಸೀಸ್)
ಮೈಸೂರಿನ ಸೆಕ್ಯುರಿಟಿ ಕಚೇರಿಯಲ್ಲಿ 70 ಲಕ್ಷ ದರೋಡೆ
ಐಸಿಐಸಿಐ ಕರ್ನಾಟಕಬಿಟ್ಟು ತೊಲಗಿ: ರೈತರ ಘೋಷಣೆ


Click it and Unblock the Notifications
