ಬೆಂಗಳೂರಿಗೆ ಮತ್ತೊಂದು 5 ಸ್ಟಾರ್ ಹೋಟೆಲ್
ಬೆಂಗಳೂರು, ಡಿ.19:ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಬಳಿ 400 ಎಕರೆ ಪ್ರದೇಶವು ಲಭ್ಯವಿದ್ದು ಅದರಲ್ಲಿ 35 ಎಕರೆ ಜಮೀನನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಲಾಗಿದೆ. ಇದರಲ್ಲಿ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರವನ್ನು ಖಾಸಗಿ ಸಾರ್ವಜನಿಕ ಸಹಯೋಗದೊಂದಿಗೆ ನಿರ್ಮಿಸಲು ಸಂಪುಟ ಒಪ್ಪಿಗೆ ನೀಡಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಜರ್ನಾದನ ರೆಡ್ಡಿ ತಿಳಿಸಿದರು.
ಹೈದರಾಬಾದ್ ಮೂಲದ ಮೆ: ಸೋಮಾ ಕನ್ಸಟ್ರಕ್ಷನ್ ಕಂಪನಿ ಅವರಿಗೆ 30 ವರ್ಷಗಳ ದೀರ್ಘಾವಧಿ ಗುತ್ತಿಗೆ ನೀಡುತ್ತಿದ್ದು ಅವರು 1100 ಕೋಟಿ ರು. ವೆಚ್ಚದಲ್ಲಿ ಈ ಕೇಂದ್ರವನ್ನು ನಿರ್ಮಿಸಲಿದ್ದು ಅದರಲ್ಲಿ ಎಕಾನಮಿ ಹೋಟೆಲ್, 5 ಸ್ಟಾರ್ ಹೋಟೆಲ್, [ಭೇಟಿ ಕೊಡಿ:ಮೈಸೂರಿನ ಸುಪ್ರಸಿದ್ಧ ಹೊಟೇಲುಗಳು || ದಿ ಟ್ರೈ ಕಲರ್ ಹೊಟೇಲ್, ಬೆಂಗಳೂರು] ದೊಡ್ಡ ಆಡಿಟೋರಿಯಂ ಇರುತ್ತದೆ. ವಿಮಾನ ನಿಲ್ದಾಣದ ನಿಯಮಾವಳಿಗಳಿಗೆ ಒಳಪಟ್ಟು ಈ ನಿರ್ಮಾಣಕಾರ್ಯ ಕೈಗೊಳ್ಳಲಾಗುತ್ತದೆ ಮತ್ತು ಇದಕ್ಕಾಗಿ ಪ್ರವಾಸೋದ್ಯಮ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ ಜನಾರ್ದನ ರೆಡ್ಡಿ ಅಂದರು. ಹೈದರಾಬಾದ್ ಮೂಲದ ಕಂಪೆನಿಗೆ ಯೋಜನೆ ವಹಿಸಿರುವುದರಲ್ಲಿ ಯಾವುದೇ ಸ್ವಾರ್ಥವಿಲ್ಲ. ಸಂಪುಟದಲ್ಲಿ ಒಪ್ಪಿಗೆ ನಂತರವೇ ಯೋಜನೆ ಕಾರ್ಯಗತವಾಗುತ್ತಿದೆ ಎಂದರು.
ಚುನಾವಣಾ ನಂತರ ಅಡಿಗಲ್ಲು ಸಮಾರಂಭವನ್ನು ನೆರವೇರಿಸಲಾಗುವುದು. ಸರ್ಕಾರಿ ಭೂಮಿಯನ್ನು ಕಂಪೆನಿಗೆ 20 ಕೋಟಿ ರು.ಗಳ ಡಿಪಾಸಿಟ್ ಪಡೆದು ನೀಡಲಾಗಿದೆ. ವಾರ್ಷಿಕವಾಗಿ ರು. 1.15 ಲಕ್ಷ ರು ಸರ್ಕಾರಕ್ಕೆ ಪಾವತಿಸಬೇಕಾಗಿದ್ದು ಪ್ರತಿ ಮೂರು ವರ್ಷಕ್ಕೆ ಶೇ.10 ರಷ್ಟು ಹೆಚ್ಚಳ ಹಾಗೂ ಕಂಪನಿಗಳಿಸುವ ಆದಾಯದಲ್ಲಿ ಶೇ.3ರಷ್ಟು ಸರ್ಕಾರಕ್ಕೆ ಸಲ್ಲಬೇಕಾಗುತ್ತದೆ. 30 ವರ್ಷಗಳ ಗುತ್ತಿಗೆ ಮುಗಿದ ನಂತರ ಪೂರ್ಣ ಆಸ್ತಿಯು ಸರ್ಕಾರದ ವಶಕ್ಕೆ ಬರುತ್ತದೆ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.
(ದಟ್ಸ್ ಕನ್ನಡವಾರ್ತೆ)
ಪೂರಕ ಓದಿಗೆ:
ಜ.16ರಿಂದ ಬೆಳಗಾವಿಯಲ್ಲಿ ಜಂಟಿ ಅಧಿವೇಶನ
ಎಂಪಿ ಪ್ರಕಾಶ್ ನಿಷ್ಪ್ರಯೋಜಕ: ಜನಾರ್ದನರೆಡ್ಡಿ
ಗಣಿಗಾಗಿ ರಾಜ್ಯದ ನಕ್ಷೆ ತಿರುಚಿಲ್ಲ : ಜನಾರ್ದನರೆಡ್ಡಿ


Click it and Unblock the Notifications
