ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾದಕ ವಸ್ತುಗಳ ನಿಷೇಧ ಸಮಿತಿಗೆ ಕುಂಬ್ಳೆ

By Staff
|
Google Oneindia Kannada News

ಮುಂಬೈ, ಡಿ. 19 : ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಖ್ಯಾತ ಲೆಗ್ ಸ್ಪಿನ್ನರ್ ಕನ್ನಡಿಗ ಅನಿಲ್ ಕುಂಬ್ಳೆ ಅವರು ಅಥ್ಲೇಟಿಕ್ಸ್ ನ ವಿಶ್ವ ಮಾದಕ ವಸ್ತುಗಳ ನಿಷೇಧ ಸಲಹಾ ಸಮಿತಿಗೆ (World Anti-Doping Agency (WADA) ಸದಸ್ಯರಾಗಿ ನಾಮಕರಣಗೊಂಡಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲಿ ತನ್ನ ಛಾಪು ಮೂಡಿಸಿರುವ ಈ ಕನ್ನಡದ ಕಲಿಗೆ ಇದೀಗ ಮತ್ತೊಂದು ಗೌರವ ದೊರೆತಿರುವುದು ಕುಂಬ್ಳೆ ಅಭಿಮಾನಿಗಳು ಸಂತಸ ತಂದಿದೆ.

ಕಳೆದ ತಿಂಗಳು ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿರುವ ಅನಿಲ್ ಕುಂಬ್ಳೆ ವಿಶ್ವ ಕಂಡ ಶ್ರೇಷ್ಠ ಲೆಗ್ ಸ್ಪಿನ್ನರ್ ಭಾರತ ಪರ ಅತಿ ಹೆಚ್ಚು ವಿಕೆಟ್ ಪಡೆದಿರುವ ಗೌರವಕ್ಕೆ ಬಾಜನರಾಗಿದ್ದಾರೆ. ವಿಶ್ವದ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದಿರುವ ಬೌಲರ್ ಎನ್ನುವ ಕೀರ್ತಿಯ ಅನಿಲ್ ಗೆ ಸಲ್ಲಬೇಕು. ಒಟ್ಟು 619 ವಿಕೆಟ್ ಪಡೆದಿರುವ ಮೂರನೇ ಸ್ಥಾನದಲ್ಲಿರುವ ಅನಿಲ್, ಮೊದಲೆರಡು ಸ್ಥಾನವನ್ನು ಶ್ರೀಲಂಕಾ ಮುತ್ತಯ್ಯ ಮುರಳೀಧರನ್ ಹಾದೂ ಆಸ್ಟ್ರೇಲಿಯಾದ ಲೆಗ್ಗಿ ಶೇನ್ ವಾರ್ನ್ ಇದ್ದಾರೆ.

ಮಾದಕ ವಸ್ತುಗಳ ನಿಷೇಧ ಸಲಹೆ ಸಮಿತಿಗೆ ಸದಸ್ಯರಾಗಿ ನಾಮಕರಣಗೊಂಡಿರುವ ಅನಿಲ್ ಕುಂಬ್ಳೆ ಅವರ ಅಧಿಕಾರಾವಧಿ ಜನವರಿ 1 ರಿಂದ ಆರಂಭವಾಗಲಿದೆ. ಅಥ್ಲೇಟಿಕ್ಸ್ ರಂಗದ ಅಭಿವೃದ್ಧಿ ಜತೆ ನೀತಿ ನಿಯಮಗಳನ್ನು ರೂಪಿಸುವುದು ಈ ಸಮಿತಿ ಕಾರ್ಯಗಳಾಗಿವೆ.

(ದಟ್ಸ್ ಕನ್ನಡ ವಾರ್ತೆ)
ಅಂತಾರಾಷ್ಟ್ರೀಯ ಕ್ರಿಕೆಟ್ಗೆ 'ಜಂಬೋ' ವಿದಾಯ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X