ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಬೇಕಿರುವ ಉಗ್ರರು ನಮ್ಮಲ್ಲಿಲ್ಲ: ಪಾಕ್

By Staff
|
Google Oneindia Kannada News

ಇಸ್ಲಾಮಾಬಾದ್. ಡಿ. 18 : ಭಾರತಕ್ಕೆ ಬೇಕಿರುವ ಜೈಷೆ ಮೊಹ್ಮದ್ ಸಂಘಟನೆಯ ಉಗ್ರ ಮೌಲಾನ ಮಾಸೂದ್ ಅಜರ್ ಪಾಕ್ ಕಸ್ಟಡಿಯಲ್ಲಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹ್ಮದ್ ಖುರೇಶಿ ಸ್ಪಷ್ಟಪಡಿಸಿದ್ದಾರೆ.

ಮೌಲಾನ ಮಸೂದ್ ಅಜರ್ ಕೂಡ ಪಾಕಿಸ್ತಾನದಲ್ಲಿ ಅನೇಕ ವಿಧ್ವಂಸಕ ಕೃತ್ಯಗಳನ್ನು ಎಸಗಿದ್ದಾನೆ. ಪಾಕಿಸ್ತಾನದ ಪೊಲೀಸರ ಸಹ ಆತನ ಬಂಧನಕ್ಕೆ ವ್ಯಾಪಕ ಜಾಲ ಬೀಸಿದ್ದಾರೆ. ಶೋಧ ಕಾರ್ಯ ಮುಂದುವರೆದಿದೆ ಎಂದು ಖುರೇಶಿ ಹೇಳಿದ್ದಾರೆ. ಇತ್ತೀಚೆಗೆ ಪಾಕಿಸ್ತಾನ ಉಗ್ರ ನೆಲೆಯಾದ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಸೇನಾ ಕಾರ್ಯಾಚರಣೆ ನಡೆಸಿ ಜೈಷೆ ಮೊಹ್ಮದ್ ಸಂಘಟನೆ ಮೌಲಾನ ಮಾಸೂದ್ ಅಜರ್, ಲಷ್ಕರ್ ಇ ತೊಯ್ಬಾ ಮುಖಂಡ ಮೊಹ್ಮದ್ ಹಫೀಜ್ ಹಾಗೂ ಮುಂಬೈ ಭಯೋತ್ಪಾದನೆ ಸಂಚಿನ ರೂವಾರಿ ಲಖ್ವಿ ಯನ್ನು ಪಾಕ್ ಸೇನೆ ಬಂಧಿಸಿದೆ ಎಂದು ಪಾಕ್ ರಕ್ಷಣಾ ಸಚಿವ ಚೌಧರಿ ಅಹ್ಮದ್ ಮುಕ್ತಾರ್ ವಾರ್ತಾ ವಾಹಿನಿಯೊಂದಕ್ಕೆ ಸಂದರ್ಶನ ನೀಡಿ ಸ್ಪಷ್ಟಪಡಿಸಿದ್ದರು.

ಇದರ ಬೆನ್ನಲ್ಲೇ ಪಾಕ್ ವಿದೇಶಾಂಗ ಸಚಿವ ಅಹ್ಮದ್ ಖುರೇಶಿ ಭಾರತಕ್ಕೆ ಬೇಕಿರುವ ಉಗ್ರರು ನಮ್ಮ ಬಂಧನದಲ್ಲಿ ಇಲ್ಲ ಎಂದು ಹೇಳುವ ಮೂಲಕ ದ್ವಂದ್ವ ನಿಲುವು ತಾಳಿದ್ದಾರೆ. ಪಾಕ್ ನಲ್ಲಿರುವ ಉಗ್ರರನ್ನು ಸೆದೆಬಡಿಯಬೇಕು ಎಂದು ಅಮೆರಿಕ ತೀವ್ರ ಒತ್ತಡ ಹಾಕಿರುವುದು ಈ ಹೇಳಿಕೆಗೆ ಕಾರಣವಾಗಿದೆ ಎನ್ನಲಾಗಿದೆ. 1999ರಲ್ಲಿ ಕಠ್ಮಂಡುವಿನಲ್ಲಿ ಭಾರತದ ವಿಮಾನ ಅಪಹರಣ ಮಾಡಿದ್ದ ಉಗ್ರರು, ಭಾರತದ ವಶದಲ್ಲಿದ್ದ ಜೈಷೆ ಮೊಹ್ಮದ್ ಮುಖಂಡ ಮೌಲಾನ ಮಾಸೂದ್ ಅಜರ್ ಹಾಗೂ ಆತನ ಇಬ್ಬರು ಸಹಚರನನ್ನು ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆಗ ಭಾರತದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಅಟಲ್ ಬಿಹಾರಿ ವಾಜಪೇಯಿ ದೇಶದ ಪ್ರಧಾನಮಂತ್ರಿ ಹುದ್ದೆಯಲ್ಲಿದ್ದರು.

(ದಟ್ಸ್ ಕನ್ನಡ ವಾರ್ತೆ)
ವಿಶ್ವಸಂಸ್ಥೆ ಆದೇಶವನ್ನು ಕಡೆಗಣಿಸಿದ ಪಾಕ್
ಕಸಬ್ ಕೇಸ್ : ವಕೀಲರಿಗೆ ಠಾಕ್ರೆ ಎಚ್ಚರಿಕೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X