ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಷ್ ಕಂಪನಿಯ ಬೂಟೇಟು ಪ್ರಿಯನ ಬಂಧನ

By Staff
|
Google Oneindia Kannada News

ಬೆಂಗಳೂರು, ಡಿ. 18 : ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ಗೆ ಇರಾಕ್ ಪತ್ರಕರ್ತನೊಬ್ಬ ಬೂಟು ಎಸೆದು ಅವಮಾನ ಮಾಡಿರುವ ಘಟನೆಯನ್ನು ಸಮರ್ಥಿಸಿಕೊಂಡಿರುವ ಮೈಕೊ ಬಾಷ್ ಕಂಪನಿ ಉದ್ಯೋಗಿ ಜಮೀಲ್ ಅಹ್ಮದ್(36)ನನ್ನು ಆಡುಗೋಡಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಜಾರ್ಜ್ ಬುಷ್ ಮೇಲೆ ಇರಾಕ್ ಪತ್ರಕರ್ತ ಬೂಟು ತೂರಿದ ಘಟನೆಗೆ ಸಂಬಂಧಿಸಿದಂತೆ ಮಂಗಳವಾರ ಬೆಳಗ್ಗೆ ಬಾಷ್ ಕಂಪನಿಯಲ್ಲಿ ಚರ್ಚೆ ನಡೆದಿದೆ. ಕಂಪನಿಯ ಉದ್ಯೋಗಿ ಜಮೀಲ್ ಆಹ್ಮದ್ ಈ ಘಟನೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾನೆ. ಜತೆಗೆ ಇಸ್ಲಾಂ ಭಯೋತ್ಪಾದನೆಯ ಪರವಾಗಿ ಮಾತನಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಮೈಕೊ ಕನ್ನಡ ಸಂಘದ ಸದಸ್ಯರು ಆತನ ಮೇಲೆ ಆಕ್ರೋಶ ವ್ಯಕ್ತಪಡಿಸಿ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ತಕ್ಷಣ ಈ ಬಗ್ಗೆ ಆಡುಗೋಡೆ ಪೊಲೀಸ್ ಠಾಣೆಗೂ ದೂರು ನೀಡಲಾಯಿತು.

ಕನ್ನಡ ಸಂಘದ ಸದಸ್ಯರು ಜಮೀಲ್ ಅಹ್ಮದ್ ನನ್ನು ಬಂಧಿಸುವಂತೆ ಪಟ್ಟು ಹಿಡಿದರು. ಹೀಗಾಗಿ ಆತನನ್ನು ಬಸವನಗುಡಿ ಠಾಣೆಗೆ ತಂದು ವಿಚಾರಣೆ ನಡೆಸಲಾಯಿತು. ಆತನ ಮನೆಯನ್ನು ಶೋಧಿಸಿದಾಗ ಕೆಲ ಹಾರ್ಡ್ ಡಿಸ್ಕ್ ಗಳು, ಉಗ್ರ ಅಫ್ಜಲ್ ಗುರು ಪರವಾಗಿ ಪ್ರಕಟವಾದ ಲೇಖನಗಳು ಲಭ್ಯವಾಗಿವೆ. ಇದರಿಂದ ಜಮೀಲ್ ಅಹ್ಮದ್ ಶಂಕಿತ ಉಗ್ರನಿರಬಹುದು ಎಂದು ಸಂಶಯ ಮೂಡಿದ್ದು, ಆತನ ದೂರವಾಣಿಗಳ ಕೆರೆಗಳ, ಈಮೇಲ್ ಗಳ ಪರಿಶೀಲನೆ ನಡೆಸಲಾಗಿದೆ. ಆದರೆ ಆತನನ್ನು ಇನ್ನೂ ಬಂಧಿಸಿಲ್ಲ, ಬೆಂಗಳೂರಿನಲ್ಲಿ ನಡೆದ ಸರಣಿ ಸ್ಫೋಟದಲ್ಲಿ ಆತನ ಕೈವಾಡವಿರುವ ಬಗ್ಗೆ ತನಿಖೆ ಶುರುವಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಗೋಪಾಲ್ ಬಿ ಹೊಸೂರು ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)
ಬುಷ್ ಗೆ ಶೂ ಎಸೆದ ಜೈದಿ ಈಗ ಹೀರೋ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X