ತುಣುಕು ಸುದ್ದಿ: ಬಿಜಿಎಸ್ ಸ್ವಾಮೀಜಿ ಆರೋಗ್ಯಸ್ಥಿರ
ಬೆಂಗಳೂರು: ಬಾಲಗಂಗಾಧರನಾಥಸ್ವಾಮೀಜಿ ಆಸ್ಪತ್ರೆಗೆ ದಾಖಲು. ಬಿಜಿಎಸ್ ಆಸ್ಪತ್ರೆಗೆ ಮುಖ್ಯಮಂತ್ರಿ ಡಾ.ಬಿಎಸ್ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಆರ್ ಅಶೋಕ್ ಭೇಟಿ, ಸ್ವಾಮೀಜಿಯ ಆರೋಗ್ಯ ಸುಧಾರಣೆಯಾಗಲೆಂದು ಹಾರೈಕೆ.
***
ಚಿಕ್ಕಮಗಳೂರು:ಜನವರಿ ಅಂತ್ಯದೊಳಗೆ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಸಿದ್ಧ . ಶೃಂಗೇರಿಯಲ್ಲಿ ಪೂರ್ವಭಾವಿಸಭೆ: ಬಿಜೆಪಿ ರಾಜ್ಯಾಧ್ಯಕ್ಷಸದಾನಂದಗೌಡ
***
ತಿಪಟೂರಿನ ಸಮೀಪ ನೊಣವಿನಕೆರೆ ಏರಿಯ ಮೇಲೆ ಚಾಲಕನ ನಿಯಂತ್ರಣ ತಪ್ಪಿದ ಟ್ರಾಕ್ಟರ್ ಪಲ್ಟಿ. ಇಬ್ಬರು ಯುವಕರು ದುರ್ಮರಣ. ಮೃತರನ್ನು ನೊಣವಿನಕೆರೆಯ ಪ್ರದೀಪ್, ಮಧು ಎಂದು ಗುರುತಿಸಲಾಗಿದೆ.
***
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಕನ್ನಡಿಗ ಹೆಚ್ ಎಲ್ ದತ್ತು ನೇಮಕ .
***
ಶ್ರೀನಗರ: ಬಿಗಿ ಪೊಲೀಸ್ ಕಟ್ಟೆಚರದ ನಡುವೆ ಆರನೇ ಹಂತದ ಮತದಾನ ಆರಂಭ, 271 ಜನ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
***
ಬೆಂಗಳೂರಿನ ಪರಪ್ಪನಹಳ್ಳಿ ಕೇಂದ್ರ ಕಾರಾಗೃಹದಲ್ಲಿ ನಿರ್ಮಾಣ ಹಂತದ ಕಟ್ಟಡದ ಕಂಬಿ ಬಿದ್ದು ಇಬ್ಬರು ಖೈದಿಗಳಿಗೆ ತೀವ್ರಗಾಯ ,ಆಸ್ಪತ್ರೆಗೆ ದಾಖಲು.
***
ಕ್ರೈಂ: ಬೆಂಗಳೂರಿನಿಂದ ಡಿ.13 ರಂದು ಅಪಹರಣವಾಗಿದ್ದ ಕಂಟ್ರಾಕ್ಟರ್ ಸಮೀವುಲ್ಲಾ ಅವರನ್ನು ರಕ್ಷಿಸಿದ ಸಂಪಿಗೆ ಹಳ್ಳಿ ಪೊಲೀಸರು. ಮಹಿಳೆ ಸೇರಿ 4 ಜನ ಅಪಹರಣಕಾರರು 2 ಲಕ್ಷ ರು ಒತ್ತೆಹಣಕ್ಕಾಗಿ ಸಮೀವುಲ್ಲಾ ಕುಟುಂಬವನ್ನು ಪೀಡಿಸುತ್ತಿದ್ದರು.
***
ಉತ್ತರಪ್ರದೇಶದ ಗೋರಖ್ ಪುರದಲ್ಲಿ ಎಟಿಎಫ್ ಕಮಾಂಡೋ ಕಾರ್ಯಾಚರಣೆ,ಪಾಕಿಸ್ತಾನದ ಐಎಸ್ ಐ ಏಜೆಂಟ್ ಬಂಧನ.ಮಹತ್ವದ ದಾಖಲೆ ವಶ.
***
ಮೈಸೂರು -ನಂಜನಗೂಡು ರಸ್ತೆಯ ಉತ್ತನಹಳ್ಳಿ ಸಮೀಪ ಕೆಎಸ್ ಆರ್ ಟಿಸಿ ಬಸ್ ಹಾಗೂ ಬೈಕ್ ಡಿಕ್ಕಿ, ಇಬ್ಬರ ಸಾವು
***
ಚಿತ್ರದುರ್ಗ: ಹೊಸದುರ್ಗ ಬಳಿ ಒಂದು ಲಕ್ಷ ರು ಮೌಲ್ಯದಸ್ಪಿರಿಟ್ ಅನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಕ್ಯಾಂಟರ್ ವಶ. ಒಬ್ಬನ ಸೆರೆ.
***
ಕೋಲಾರ: ಆಟೋ ಚಾಲಕರ ಲೈಸನ್ಸ್ ಗೆ 8 ನೇ ತರಗತಿ ಪಾಸಾಗುವುದನ್ನು ಕಡ್ಡಾಯಗೊಳಿಸಿರುವುದನ್ನು ಖಂಡಿಸಿ, ಆಟೋ ಚಾಲಕರ ಸಂಘದಿಂದ ಧರಣಿ
(ದಟ್ಸ್ ಕನ್ನಡ ಸುದ್ದಿ ತುಣುಕು)












Click it and Unblock the Notifications