ದುರ್ಯೋಧನನಿಗೆ ಪಾಠ ಕಲಿಸಿ, ಉಗ್ರಪ್ಪ

ಹುಕ್ಕೇರಿ, ಡಿ. 17 : ಹುಕ್ಕೇರಿ ಕ್ಷೇತ್ರದ ಮತದಾರರಿಗೆ ಅವಮಾನ ಮಾಡಿ ಸ್ವಾಭಿಮಾನಕ್ಕೆ ದಕ್ಕೆ ಉಂಟು ಮಾಡಿರುವ ದುರ್ಯೋಧನನಿಗೆ (ಉಮೇಶ ಕತ್ತಿ) ಡಿ 27 ರಂದು ನಡೆಯಲಿರುವ ಮರುಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ವಿ ಎಸ್ ಉಗ್ರಪ್ಪ ಮತದಾರರಿಗೆ ಮನವಿ ಮಾಡಿಕೊಂಡರು.

ಇಂದು ಹುಕ್ಕೇರಿ ಕ್ಷೇತ್ರದ ಕಣಗಲ್ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅಡಳಿತ ಹಾಗೂ ಉಮೇಶ ಕತ್ತಿ ಅವರ ಪಕ್ಷಾಂತರ ಕ್ರಮವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ವಿಧಾನಸಭೆ ಚುನಾವಣೆ ಕಳೆದ ಮೂರು ತಿಂಗಳು ಕಳೆದಿಲ್ಲ. ಕ್ಷೇತ್ರದ ಅಭಿವೃದ್ಧಿಯಾಗಲಿ ಎಂದು ಆರಿಸಿ ಕಳಿಸಿದ್ದ ಉಮೇಶ್ ಕತ್ತಿ ನಿಮಗೆ ಮೋಸ ಮಾಡಿದ್ದಾನೆ ಎಂದು ಕಿಡಿಕಾರಿದರು. ಕ್ಷೇತ್ರದಲ್ಲಿ ದುರ್ಯೋಧನನ ಮತ್ತು ದುಶ್ಯಾನನನ ಹಾಗೆ ವರ್ತಿಸುತ್ತಿರುವ ಉಮೇಶ್ ಕತ್ತಿ ಮತ್ತು ರಮೇಶ ಕತ್ತಿ ಅವರಿಗೆ ಬ್ರೇಕ್ ಹಾಕಿ ಎಂದು ಮನವಿ ಮಾಡಿಕೊಂಡರು.

ನಿಮ್ಮ ಸ್ವಾಭಿಮಾನಕ್ಕೆ ಕುಂದು ತಂದಿರುವ ಇಂತಹ ವ್ಯಕ್ತಿಗೆ ಈ ಚುನಾವಣೆ ನಿಮಗೆ ಉತ್ತಮ ಅವಕಾಶ. ಇದನ್ನು ಸರಿಯಾಗಿ ಬಳಸಿಕೊಳ್ಳಿ, ನಿಮ್ಮ ಮತಕ್ಕೆ ಗೌರವ ನೀಡದಿರುವ ಇಂತಹ ರಾಜಕಾರಣಿಗಳನ್ನು ಸೋಲಿಸಲು ಪಣ ತೊಡಿ ಎಂದು ಉಗ್ರಪ್ಪ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

ಕತ್ತಿಯ ಕತ್ತಿ ಮೊನಚಾಗಿಲ್ಲ, ಅದು ಸಂಪೂರ್ಣ ಮೊಂಡವಾಗಿದೆ ಎಂದು ವ್ಯಂಗ್ಯವಾಡಿದ ಉಗ್ರಪ್ಪ, ಅಧಿಕಾರದ ಅಮಿಷಕ್ಕೆ ಒಳಗಾಗಿ ಪಕ್ಷಾಂತರ ಮಾಡಿ ಅನಾವಶ್ಯಕವಾಗಿ ಮತ್ತೊಮ್ಮೆ ಚುನಾವಣೆ ಎದುರಿಸುವಂತೆ ಮಾಡಿದ ಉಮೇಶ ಕತ್ತಿ ಅವರಿಗೆ ಮತ ನೀಡಬೇಡಿ. ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಜಯಪ್ರಕಾಶ್ ಅವರಿಗೆ ಮತ ನೀಡಿ ಎಂದು ಅವರು ಕೇಳಿಕೊಂಡರು.

(ದಟ್ಸ್ ಕನ್ನಡ ವಾರ್ತೆ)
ದೇಶಪಾಂಡೆಗೆ ಜೆಡಿಎಸ್ ಅಭ್ಯರ್ಥಿ ಸವಾಲ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+