ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2008ರಲ್ಲಿ 95 ಸುದ್ದಿ ಮಿತ್ರರು ಹತ

By Staff
|
Google Oneindia Kannada News

ಜಿನೆವಾ, ಡಿ. 17 : 2008 ಸುದ್ದಿ ಮನೆಯ ಮಿತ್ರರಿಗೆ ಈ ವರ್ಷ ಮತ್ತೆ ಕಷ್ಟದ ಕಾಲ ಬಿಡಿ. ಸುದ್ದಿ ಮನೆಗೆ ತಾಜ್ ಸುದ್ದಿ ಕಳಿಸುವ ಧಾವಂತದಲ್ಲಿ ಕಾರ್ಯನಿರತ ಪತ್ರಕರ್ತರು ಆಕಸ್ಮಿಕವೂ, ಅನಿವಾರ್ಯವೋ ಒಟ್ಟಿನಲ್ಲಿ ಕರ್ತವ್ಯದಲ್ಲಿದ್ದ ಹಿರಿಯ ಕಿರಿಯ ಪತ್ರಕರ್ತರು ಸೇರಿ ವಿವಿಧ ಕಾರಣಗಳಿಂದ 95 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಜಿನಿವಾ ಮೂಲದ ಪೆಕ್ (Press Emblem Campaign (PEC) ಅಂಕಿ ಅಂಶಗಳ ಪ್ರಕಾರ, 2008ರಲ್ಲಿ ಸುಮಾರು 95 ಮಂದಿ ಪತ್ರಕರ್ತರು ಸೇವೆ ಸಲ್ಲಿಸುತ್ತಿದ್ದ ವೇಳೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ. 12 ತಿಂಗಳ ಅವಧಿಯಲ್ಲಿ 32 ದೇಶಗಳ ಪತ್ರಕರ್ತರು ಮೃತಪಟ್ಟಿದ್ದಾರೆ. ಆದರೆ ಸಂತಸ ಸಂಗತಿ ಎಂದರೆ, 2007 ರಲ್ಲಿ 110 ಮಂದಿ ಪತ್ರಕರ್ತರು ಪ್ರಾಣ ಕಳೆದುಕೊಂಡಿದ್ದರು ಎಂದಿದೆ.

ಈ ವರ್ಷ ಪತ್ರಕರ್ತರಿಗೆ ಅಪಾಯದ ಸ್ಥಳ ಎಂದೇ ಗುರುತಿಸಿಕೊಂಡಿರುವ ಇರಾಕಿನಲ್ಲಿ ಅತೀ ಹೆಚ್ಚು ಅಂದರೆ ವಿವಿಧ ದೇಶಗಳ 15 ಮಂದಿ ಪತ್ರಕರ್ತರು ಸಾವನ್ನಪ್ಪಿದ್ದಾರೆ. 2007 ರಲ್ಲಿ ಬರೋಬ್ಬರಿ 50 ಮಂದಿ ಪತ್ರಕರ್ತರು ಇರಾಕಿನಲ್ಲಿ ಸಾವನ್ನಪ್ಪಿದ್ದರು ಎಂದು ಪೆಕ್ ಸಂಸ್ಥೆಯ ಕಾರ್ಯದರ್ಶಿ ಜೆ. ಬ್ಲೇಜ್ ಲೆಂಬೆನ್ ತಿಳಿಸಿದ್ದಾರೆ.

ಮೆಕ್ಸಿಕೋ 2ನೇ ಸ್ಥಾನದಲ್ಲಿದ್ದು, ಮಾದಕ ವಸ್ತುಗಳ ಕಳ್ಳ ಸಾಗಣಿಗೆ ಸಂಬಂಧಿಸಿದಂತೆ ಸುದ್ದಿ ಮಾಡಲು ತೆರಳಿದ್ದ 9 ಮಂದಿ ಸುದ್ದಿಗಾರರು ಪ್ರಾಣ ಕಳೆದುಕೊಂಡಿದ್ದಾರೆ. ಪಾಕಿಸ್ತಾನ ಮೂರನೇ ಸ್ಥಾನದಲ್ಲಿ 8 ಮಂದಿ ಪತ್ರಕರ್ತರು ಮೃತಪಟ್ಟಿದ್ದಾರೆ. ಅಪಘಾನಿಸ್ತಾನದ ಗಡಿ ಭಾಗದಲ್ಲಿ ಸುದ್ದಿಗಾರರ ಸಾವುಗಳು ನಡೆದಿವೆ ಎನ್ನುವುದು ವಿಶೇಷವಾಗಿದೆ. ಇದರ ಜತೆಗೆ ಕಾರ್ಯನಿರತ ಪತ್ರಕರ್ತರ ಅಪಹರಣ ಕೃತ್ಯಗಳು ನಡೆದಿವೆ. ಮುಖ್ಯವಾಗಿ ಅಪಘಾನಿಸ್ತಾನ, ಸೋಮಾಲಿಯಾ, ಇರಾಕ್, ಗಾಜಾ ಪಟ್ಟಿ, ಹಾಗೂ ಮೆಕ್ಸಿಕೋ ಗಳಲ್ಲಿ ನಡೆದಿವೆ ಎಂದು ಸಂಸ್ಥೆ ತಿಳಿಸಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X