ಕಚ್ಚಾ ತೈಲ ಬೆಲೆ ಕುಸಿತ, ಪೆಟ್ರೋಲ್ ಬೆಲೆ ಇಳಿಕೆ?
ನವದೆಹಲಿ, ಡಿ. 16 : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಮತ್ತಷ್ಟು ಕುಸಿದಿದ್ದು ತೈಲೋತ್ಪನ್ನಗಳ ಬೆಲೆ ಇಳಿಕೆ ಕುರಿತು ಕೇಂದ್ರ ಚಿಂತನೆ ನಡೆಸಿದೆ ಎಂದು ಕೇಂದ್ರದ ಗೃಹ ಸಚಿವ ಪಿ ಚಿದಂಬರಂ ಹೇಳಿದ್ದಾರೆ.
ರಾಜ್ಯಸಭೆಯಲ್ಲಿಂದು ಪ್ರಶ್ನೋತ್ತರ ವೇಳೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇನ್ನಷ್ಟು ಕುಸಿದರೆ ಖಂಡಿತವಾಗಿಯೂ ತೈಲೋತ್ಪನ್ನಗಳ ಬೆಲೆ ಇಳಿಸಲಾಗುವುದು ಎಂದು ಭರವಸೆ ನೀಡಿದರು.
ಕಚ್ಚಾ ತೈಲದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಇಳಿದ ಕಾರಣ ಕಳೆದ ತಿಂಗಳು ಪೆಟ್ರೋಲ್ 5 ರುಪಾಯಿ ಹಾಗೂ ಡಿಸೇಲ್ 2 ರುಪಾಯಿಗಳನ್ನು ಕಡಿಮೆ ಕೇಂದ್ರ ಕಡಿಮೆ ಮಾಡಿತ್ತು. ಪೆಟ್ರೋಲ್ ಬೆಲೆ 20 ರು.ಯಷ್ಟು ಇಳಿಯುವುದೆಂದು ನಿರೀಕ್ಷಿಸಿದ್ದ ಜನ ಭಾರೀ ನಿರಾಶೆ ವ್ಯಕ್ತಪಡಿಸಿದ್ದರು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕಡಿತವಾಗಿದ್ದರೂ ಕರ್ನಾಟಕ ರಾಜ್ಯ ಸರ್ಕಾರ ಮಾತ್ರ ಬಸ್ ದರ ಇಳಿಸುವುದಿಲ್ಲವೆಂದು ತಿಪ್ಪೆ ಸಾರಿತ್ತು.
ಕಳೆದ ಜುಲೈ ತಿಂಗಳಿನಲ್ಲಿ ಬ್ಯಾರಲ್ ಗೆ 145 ಡಾಲರಷ್ಟಿದ್ದ ಕಚ್ಚಾ ತೈಲದ ಬೆಲೆ ಇದಗೀಗ ದಿಢೀರ್ ಅಂತ ಕುಸಿದು ಪ್ರತಿ ಬ್ಯಾರಲ್ ಗೆ 44.48 ಡಾಲರ್ ಆಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications