ಬೀಸಿದ ಚಪ್ಪಲಿ ತಪ್ಪಿಸಿಕೊಂಡ ಜಾರ್ಜ್ ಬುಷ್

Iraqi journalist throws shoe at George Bush
ಬಾಗ್ದಾದ್, ಡಿ, 15 : ಜಗತ್ತಿನ ದೊಡ್ಡಣ್ಣ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ಅವರಿಗೆ ಇಂದು ಇರಾಕಿನಲ್ಲಿ ಮಹಾಮಂಗಳಾರತಿ ಆಗಿದೆ. ಇರಾಕಿನ ವಾರ್ತಾ ವಾಹಿನಿ ವರದಿಗಾರನೊಬ್ಬ ಬುಷ್ ಕಡೆಗೆ ತನ್ನ ಎರಡು ಬೂಟುಗಳನ್ನು ಎಸೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವಮಾನ ಮಾಡಿರುವ ಪ್ರಕರಣ ನಡೆದಿದೆ.

ಮುಂತೆದಾರ್ ಅಲ್ ಜೀದಿ ಎಂಬ ಪತ್ರಕರ್ತನೆ ಬುಷ್ ಮೇಲೆ ಶೋ ಎಸೆದು ಸುದ್ದಿ ಮಾಡಿರುವ ಭೂಪ. ಇರಾಕ್ ಪ್ರವಾಸದಲ್ಲಿ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ಹಾಗೂ ಇರಾಕ್ ಅಧ್ಯಕ್ಷ ನೌರಿ ಅಲ್ ಮಾಲಿಕಿ ಇಬ್ಬರು ಸುದ್ದಿಗೋಷ್ಠಿ ನಡೆಸುತ್ತಿದ್ದರು. ಯಥಾ ಪ್ರಕಾರ ನೂರಾರು ಮಂದಿ ಪತ್ರಕರ್ತರು ಗುಂಪು ಪತ್ರಿಕಾಗೋಷ್ಠಿ ಪಾಲ್ಗೊಂಡಿದ್ದರು.

ಅಲ್ ಬಾಗ್ದಾದೀಯಾ ಎಂಬ ಸ್ಥಳೀಯ ವಾರ್ತಾ ವಾಹಿನಿ ವರದಿಗಾರ ಮುಂತೆದಾರ್ ಅಲ್ ಜೀದಿ, ಬುಷ್ ಮೇಲೆ ತನ್ನ ಎರಡು ಬೂಟುಗಳನ್ನು ಒಂದರ ಮೇಲೊಂದು ಎಸೆದು ಅರೇಬಿಕ್ ಭಾಷೆಯಲ್ಲಿ ಅವಾಚ್ಯವಾಗಿ ನಿಂದಿಸಿದ್ದಾನೆ. ಪತ್ರಕರ್ತ ಎಸೆದ ಬೂಟು ತನ್ನೆಡೆಗೆ ಬರುತ್ತಿದ್ದನ್ನು ಗಮನಿಸಿದ ಬುಷ್ ಸ್ವಲ್ಪದರಲ್ಲಿಯೇ ಪಾರಾದರು. ನಂತರ ಪತ್ರಕರ್ತನನ್ನು ರಕ್ಷಣಾ ಇಲಾಖೆ ಸಿಬ್ಬಂದಿ ಹೊರದಬ್ಬಿ ವಿಚಾರಣೆ ನಡೆಸತೊಡಗಿದ್ದಾರೆ. ತನ್ನ ಬಳಿ ಇದ್ದ ಶೂಗಳನ್ನು ನೋಡಿ 'ಇವು ನನ್ನ ಸೈಜಿಗೆ ಸರಿ ಹೊಂದುವುದಿಲ್ಲ'ಎಂದು ನಗಾಡುತ್ತಾ ಬುಷ್ ಪ್ರತಿಕ್ರಿಯೆ ನೀಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಬುಷ್ ಚಪ್ಪಲಿ ಸೇವೆ ವೀಕ್ಷಣೆಗೆ ಜನಜಾತ್ರೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+