ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುರೋಹಿತ್ ನನ್ನು ನಮಗೆ ಕೊಡಿ :ಪಾಕ್

By Staff
|
Google Oneindia Kannada News

ಇಸ್ಲಾಮಾಬಾದ್, ಡಿ. 12 : ಭಾರತ ಮತ್ತು ಪಾಕಿಸ್ತಾನ ನಡುವೆ ಸಂಚರಿಸುತ್ತಿದ್ದ ಸಮ್ಜೋತಾ ಎಕ್ಸ್ ಪ್ರೆಸ್ ರೈಲು ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಸೇನಾಧಿಕಾರಿ ಲೆ. ಕರ್ನಲ್ ಶ್ರೀಕಾಂತ್ ಪ್ರಸಾದ್ ಪುರೋಹಿತ್ ಅವರನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿ ಎಂದು ಪಾಕ್ ಸರ್ಕಾರ ಭಾರತಕ್ಕೆ ಸವಾಲು ಹಾಕಿದೆ.

ಮುಂಬೈ ಭಯೋತ್ಪಾದನೆಗೆ ಕಾರಣರಾದ ಲಷ್ಕರ್-ಇ-ತೊಯ್ಬಾ ಸಂಘಟನೆ ಮುಖ್ಯಸ್ಥ ಮೊಹ್ಮದ್ ಹಾಗೂ ಜೈಶೆ-ಇ-ಮೊಹ್ಮದ್ ಸಂಘಟನೆಯ ಮುಖಂಡ ಮೌಲಾನ ಮಾಸೂದ್ ಅಜರ್ ಹಾಗೂ ಕೇಡಿ ದಾವೂದ್ ಇಬ್ರಾಹಿಮ್ ಸೇರಿ ಒಟ್ಟು 21 ಮಂದಿ ಉಗ್ರರನ್ನು ಭಾರತಕ್ಕೆ ಹಸ್ತಾಂತರಿಸಿ ಎಂದು ಭಾರತ ಸರ್ಕಾರ ಪಾಕ್ ಮೇಲೆ ಒತ್ತಡ ಹೇರಿತ್ತು. ಇದರ ಬೆನ್ನಲ್ಲೇ ಪಾಕ್ ಸರ್ಕಾರ ಮಾಲೇಗಾಂವ್ ಸ್ಫೋಟ ಹಾಗೂ ಸಮ್ಜೋತಾ ಎಕ್ಸ್ ಪ್ರೆಸ್ ರೈಲು ಸ್ಫೋಟದಲ್ಲಿ ಭಾಗಿಯಾಗಿರುವ ಆರೋಪಕ್ಕೆ ಗುರಿಯಾಗಿ ವಿಚಾರಣೆ ಎದುರಿಸುತ್ತಿರುವ ಲೆ. ಕರ್ನಲ್ ಶ್ರೀಕಾಂತ್ ಪುರೋಹಿತ್ ಅವರನ್ನು ಪಾಕ್ ಹಸ್ತಾಂತರಿಸಿ ಎಂದು ಬೇಡಿಕೆ ಮುಂದಿಟ್ಟಿರುವ ಅಂಶ ಬೆಳಕಿಗೆ ಬಂದಿದೆ.

2007ರ ಫೆಬ್ರುವರಿ 7 ರಂದು ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಚರಿಸುತ್ತಿದ್ದ ಸಮ್ಜೋತಾ ರೈಲನ್ನು ದೆಹಲಿಯಿಂದ 100 ಕಿ ಮೀ ದೂರದ ಪಾಣಿಪತ್ ಬಳಿ ಸ್ಫೋಟಗೊಳಿಸಲಾಗಿತ್ತು. ಈ ಕೃತ್ಯದಲ್ಲಿ 64 ಮಂದಿ ಮೃತಪಟ್ಟಿದ್ದರು. ಮೃತಪಟ್ಟವರಲ್ಲಿ ಪಾಕಿಸ್ತಾನಕ್ಕೆ ಸೇರಿದವರು ಹೆಚ್ಚು ಜನರಿದ್ದರು. ಈ ಹಿನ್ನೆಲೆಯಲ್ಲಿ ನಮ್ಮ ನಾಗರಿಕನ್ನು ಹತ್ಯೆ ಮಾಡಿ ಆರೋಪಿಯಾಗಿರುವ ಪುರೋಹಿತ್ ನನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿ ಎಂದು ಪಾಕ್ ಸರ್ಕಾರ ಭಾರತಕ್ಕೆ ತಿರುಗೇಟು ನೀಡಿದೆ.

ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ಮುಖ್ಯಸ್ಥರಾಗಿದ್ದ ದಿವಂಗತ ಹೇಮಂತ್ ಕರ್ಕರೆ ನೇತೃತ್ವದಲ್ಲಿ ನಡೆಸಿದ ತನಿಖೆಯಲ್ಲಿ ಪ್ರಕರಣ ಬಯಲಿಗೆ ಬಂದಿತ್ತು. ಮಾಲೇಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಸಾಧ್ವಿ ಪ್ರಗ್ಯಾಸಿಂಗ್ ಅವರನ್ನು ಬಂಧಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)
ಭಯೋತ್ಪಾದನೆಗೆ ಯುದ್ಧ ಮದ್ದಲ್ಲ;ಪ್ರಣಬ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X