ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರ ಕಸಬ್ ತಂದೆ ಅಮೀರ್ ಸಂದರ್ಶನ

By Staff
|
Google Oneindia Kannada News

ನನಗೆ ಮೊದಮೊದಲು ನಂಬಲು ಸಾಧ್ಯವಾಗಲಿಲ್ಲ. ಅಜ್ಮಲ್ ಭಾವಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾದ ನಂತರ ಇವನು ನನ್ನ ಮಗ ಅಜ್ಮಲ್ ಕಸಬ್ ಎಂದು ಸ್ಪಷ್ಟವಾಯಿತು ಎಂದು ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿ ಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ನ ತಂದೆ ಅಮೀರ್ ಕಸಬ್ ಬಿಬಿಸಿ ವಾರ್ತಾ ವಾಹಿನಿಗೆ ಹೇಳಿದ್ದಾರೆ.

ಅಜ್ಮಲ್ ನ ತಂದೆ ಅಮೀರ್ ಕಸಬ್ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಒಕಾರ ಜಿಲ್ಲೆಯ ಪರೀದ್ ಕೋಟ್ ಎಂಬ ಚಿಕ್ಕ ಹಳ್ಳಿಯ ನಿವಾಸಿಯಾಗಿದ್ದಾರೆ. ಇವರು ಕೂಡಾ ಲಷ್ಕರ್ ಇ ತೊಯ್ಬಾ ಸಂಘಟನೆಯ ಮಾಜಿ ಕಾರ್ಯಕರ್ತ ಎಂದು ತಿಳಿದು ಬಂದಿದೆ. ಕಳೆದ ನ. 26 ರಂದು ಭಾರತದ ಮುಂಬೈನಲ್ಲಿ ನಡೆದ ಭಯೋತ್ಪಾದನೆಯಲ್ಲಿ ತನ್ನ ಪುತ್ರನ ಕೈವಾಡವಿರುವುದನ್ನು ಮೊದಲು ನನಗೆ ನಂಬಲು ಸಾಧ್ಯವಾಗಿಲ್ಲ. ಆದರೆ ನಂತರ ದಿನಗಳಲ್ಲಿ ನನಗೆ ತೆಡೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅಮೀರ್ ಬಿಬಿಸಿ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ.

ಬ್ರಿಟನ್ ಅಬ್ಸರ್ವರ್ ಹಾಗೂ ಬಿಬಿಸಿ ವಾರ್ತಾ ವಾಹಿನಿ ಮಾಡಿದ ವರದಿಗಳ ಪ್ರಕಾರ, ಅಜ್ಮಲ್ ಕಸಬ್ ಚಿಕ್ಕ ವಯಸ್ಸಿನಿಂದಲೇ ಅಪರಾಧಿ ಕೃತ್ಯದಲ್ಲಿ ತೊಡಗಿದ್ದ. ನಾಲ್ಕು ವಯಸ್ಸಿನಲ್ಲಿಯೇ ಮನೆ ಬಿಟ್ಟು ಹೊರಟ ಅಜ್ಮಲ್ ಕಸಬ್, ಇಸ್ಲಾಮಾಬಾದ್ ನಲ್ಲಿ ಅನೇಕ ಅಪರಾಧಿ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ನಂತರ ದಿನಗಳಲ್ಲಿ ಅವನಿಗೆ ಲಷ್ಕರ್ ಇ ತೊಯ್ಬಾ ಸಂಘಟನೆಯ ನಂಟು ಬೆಳೆಯಿತು ಎಂದು ಹೇಳಿವೆ.

ಅಮೀರ್ ಕಸಬ್ ಪ್ರಕಾರ, ತಮ್ಮ ಮಗ ಅಜ್ಮಲ್ ಕಳೆದ ನಾಲ್ಕು ವರ್ಷಗಳಿಂದ ಕುಟುಂಬದೊಂದಿಗೆ ಸಂಪರ್ಕ ಇಟ್ಟುಕೊಂಡಿರಲಿಲ್ಲ. ಸಂಘಟನೆ ಸೇರಿಕೊಂಡಿದ್ದಾನೆ ಎಂದು ತಿಳಿದಿತ್ತು. ಹುಡುಕುವ ಪ್ರಯತ್ನ ಮಾಡಿರಲಿಲ್ಲ ಎಂದು ಹೇಳಿದ್ದಾರೆ. ಕಸಬ್ ಸೇರಿದಂತೆ ನಾಲ್ಕು ಗಂಡು, ಮೂರು ಹೆಣ್ಣು ಮಕ್ಕಳಿದ್ದಾರೆ ಎಂದು ಅಮೀರ್ ಹೇಳಿದರು.

ಭಯೋತ್ಪಾದನೆಗೆ ಯುದ್ಧ ಮದ್ದಲ್ಲ;ಪ್ರಣಬ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X