ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಳೆ ವಿಶ್ವ ಸುಂದರಿ ಅಂತಿಮ ಹಣಾಹಣಿ

By Staff
|
Google Oneindia Kannada News

parvathy omankuttan
ನವದೆಹಲಿ, ಡಿ. 12 : ದಕ್ಷಿಣ ಆಫ್ರಿಕಾದ ಜೋಹಾನ್ಸಬರ್ಗ್ ನಲ್ಲಿ ನಾಳೆ ವಿಶ್ವ ಸುಂದರಿ ಸ್ಪರ್ಧೆಯ ಅಂತಿಮ ಸುತ್ತಿನ ಹಣಾಹಣಿ ನಡೆಯಲಿದ್ದು ಭಾರತದ ಚೆಲುವೆ ಪಾರ್ವತಿ ಒಮ್ಮನ್ ಕುಟ್ಟನ್ ಪ್ರಶಸ್ತಿ ಗೆಲ್ಲುವ ಫೆವರೇಟ್ ಗಳಲ್ಲಿ ಒಬ್ಬರಾಗಿದ್ದಾರೆ.

21ರ ಹರೆಯದ 5,9 ಉದ್ದ ಇರುವ ಈ ಕೇರಳದ ಚೆಲುವೆ ವಿಶ್ವ ಸುಂದರಿ ಮುಕುಟ ಧರಿಸುವ ಭರವಸೆ ಮೂಡಿಸಿದ್ದಾರೆ. ಏಪ್ರಿಲ್ ನಲ್ಲಿ ಹೈದರಾಬಾದ್ ನಲ್ಲಿ ನಡೆದ ಮಿಸ್ ಇಂಡಿಯಾ ವರ್ಲ್ಡ್ ಸ್ಪರ್ದೆಯಲ್ಲಿ ದೇಶವನ್ನು ಸ್ಪರ್ದಿಸಲು ಆಯ್ಕೆಗೊಂಡಿದ್ದರು.

ಈ ಹಿಂದೆ ವಿಶ್ವ ಸುಂದರಿ ಪ್ರಶಸ್ತಿ ಗಳಿಸಿದ ಬ್ಯೂಟಿ ಕ್ವೀನ್ ಗಳು ಎಂದರೆ, 1966 ರಲ್ಲಿ ರೀಟಾ ಫಾರಿಯ, 1994 ರಲ್ಲಿ ಐಶ್ವರ್ಯ ರೈ, 1997 ರಲ್ಲಿ ಡಯಾನ ಹೇಡನ್, 1999 ಯುಕ್ತಾ ಮುಖಿ ಮತ್ತು 2000 ರಲ್ಲಿ ಪ್ರಿಯಾಂಕ ಚೋಪ್ರಾ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X