ಉ ಕ ಅಭಿವೃದ್ಧಿಯ 104 ಕೋಟಿ ಗುಳಂ
ಗುಲ್ಬರ್ಗಾ, ಡಿ. 12 : ಹೈದರಾಬಾದ್ ಕರ್ನಾಟಕದ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ ಬಿಡುಗಡೆ ಮಾಡಿರುವ ಅನುದಾನವನ್ನು ಇಲಾಖೆಗಳು ಉಪಯೋಗಿಸಿಕೊಳ್ಳುವಲ್ಲಿ ವಿಫಲವಾಗಿವೆ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಆರೋಪಿಸಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಬಿಡುಗಡೆ ಮಾಡಿರುವ ಅನುದಾನ ದುರುಪಯೋಗವಾಗಿದೆ ಎಂದರು. ದಕ್ಷಿಣ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ ಸರ್ಕಾರ ಹೈದರಾಬಾದ್ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಪಣ ತೊಟ್ಟಿದೆ. ಅದರೆ ಸರ್ಕಾರ ಅಶಯಕ್ಕೆ ಕುಂದು ತಂದಿರುವ ಅಧಿಕಾರಿಗಳು ನಂಜುಂಡಪ್ಪ ವರದಿ ಪ್ರಕಾರ ಸರ್ಕಾರ ಬಿಡುಗಡೆ ಮಾಡಿರುವ 104 ಕೋಟಿ ರುಪಾಯಿಗಳನ್ನು ದುರುಪಯೋಗ ಮಾಡಿಕೊಂಡಿರುವ ಬಗ್ಗೆ ತಿಳಿದು ಬಂದಿದೆ ಎಂದು ಕಿಡಿಕಾರಿದರು.
ಅಧಿಕಾರಿಗಳ ಸರ್ಕಾರದ ವೇಗದಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಳೆದ ನಾಲ್ಕು ದಶಕಗಳಿಂದ ಈ ಭಾಗ ಸಂಪೂರ್ಣ ಹಿಂದುಳಿಯಲು ಕಾರಣವಾಗಿದೆ. ಸರ್ಕಾರದ ಹಣವನ್ನು ಪೋಲು ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸರ್ಕಾರ ಇದೇ 17 ರಂದು ಮುಖ್ಯಮಂತ್ರಿಯವರಿಗೆ ದೂರು ದಾಖಲಿಸಲಾಗುವುದು ಎಂದು ನಮೋಶಿ ಎಚ್ಚರಿಕೆ ನೀಡಿದರು.
(ದಟ್ಸ್ ಕನ್ನಡ ವಾರ್ತೆ)
ಹೈ.ಕರ್ನಾಟಕದ ಥೂಛೀ ಮಂದಿ


Click it and Unblock the Notifications
