ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಒಎನ35 ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್

By Staff
|
Google Oneindia Kannada News

ವಾಷಿಂಗ್ ಟನ್, ಡಿ. 12 : ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ವಹಿವಾಟಿನಲ್ಲಿ ತೀವ್ರ ಕುಸಿತ ಅನುಭವಿಸಿದ ಹಿನ್ನೆಲೆಯಲ್ಲಿ ಬ್ಯಾಂಕ್ ಅಫ್ ಅಮೆರಿಕ ಮೂರು ವರ್ಷಗಳ ಅವಧಿಯಲ್ಲಿ ತನ್ನ 35 ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲು ರೆಡಿಯಾಗಿದೆ. ಇದರ ಜೊತೆಗೆ ಮೆರಿಲ್ ಲಿಂಚ್ ಕಂಪನಿಯೊಂದಿನ ವಿಲೀನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ.

2009ರ ಅರಂಭದಿಂದ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಸುಮಾರು 30 ರಿಂದ 35 ಸಾವಿರ ಉದ್ಯೋಗಿಗಳನ್ನು ನೌಕರಿಯಿಂದ ತೆಗೆದು ಹಾಕಲು ನಿರ್ಧರಿಸಲಾಗಿದೆ. ಮೂರು ವರ್ಷದೊಳಗೆ ಇಷ್ಟು ಸಂಖ್ಯೆಯ ನೌಕರರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳಲಿದ್ದಾರೆ. ಆರ್ಥಿಕ ಹಿನ್ನೆಡೆಯಿಂದ ಬ್ಯಾಂಕ್ ನ ವಹಿವಾಟಿಗೆ ಭಾರಿ ಪೆಟ್ಟು ಬಿದ್ದಿದ್ದರಿಂದ ಇಂತಹ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಬ್ಯಾಂಕ್ ನ ಮೂಲಗಳು ತಿಳಿಸಿವೆ.

ಅಲ್ಲದೇ, ಅಮೆರಿಕದ ಇನ್ನೊಂದು ಬೃಹತ್ ಸಂಸ್ಥೆ ಇತ್ತೀಚಿನ ದಿನಗಳಲ್ಲಿ ತೀವ್ರ ಆರ್ಥಿಕ ಕುಸಿತ ಕಂಡಿದ್ದರಿಂದ ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಅನುಮತಿ ಮೇರೆಗೆ ಅಮೆರಿಕನ್ ಬ್ಯಾಂಕ್ ಜೊತೆಗೆ ವಿಲೀನ ಮಾಡಿಕೊಳ್ಳಲು ನಿರ್ಧರಿಸಲಾಗಿತ್ತು. ಈ ಕುರಿತು ಈಗಾಗಲೇ ಎಲ್ಲ ಪ್ರಕ್ರಿಯೆಗಳು ಸೆಪ್ಟೆಂಬರ್ ತಿಂಗಳಲ್ಲಿಯೇ ಮುಗಿದಿವೆ. ಆದರೆ, ಇದೀಗ ಉಂಟಾಗಿರುವ ಆರ್ಥಿರ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿಲೀನ ಪ್ರಕಿಯೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಮೆರಿಕದಲ್ಲಿಯೇ ಬೃಹತ್ ಬ್ಯಾಂಕ್ ಎನಿಸಿದ್ದು. ಒಟ್ಟು 2.7 ಟ್ರಲಿಯನ್ ಆಸ್ತಿ ಹೊಂದಿದೆ.

(ಏಜೆನ್ಸೀಸ್)

ಯಂಗ್ ಇದ್ದ ಯಾಹೂ ಯಂಗ್ ಆಗೋಯ್ತು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X