ಕ್ರಿಕೆಟ್, ಪಾಕ್ ಪ್ರವಾಸ ನೋ ಗಿಲ್
ನವದೆಹಲಿ, ಡಿ. 12 : ಮುಂಬೈ ಭಯೋತ್ಪಾದನೆಯ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಪ್ರವಾಸವನ್ನು ಕೈಗೊಳ್ಳುವುದನ್ನು ಭಾರತ ಸರ್ಕಾರ ಸ್ಪಷ್ಟವಾಗಿ ತಳ್ಳಿಹಾಕಿದೆ.
ಪಾಕಿಸ್ತಾನ ಒಂದು ತಂಡ ಭಾರತದ ನಗರಗಳಲ್ಲಿ ನಡೆಸುತ್ತಿರುವ ವಿಧ್ವಂಸಕ ಕೃತ್ಯಗಳ ನಡೆಸುತ್ತಿದ್ದು, ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಭಾರತದ ತಂಡವನ್ನು ಕಳಿಸುವುದು ಯಾವ ಪುರುಷಾರ್ಥಕ್ಕೆ ಎಂದು ಕೇಂದ್ರದ ಕ್ರೀಡಾ ಸಚಿವ ಎಂ ಎಸ್ ಗಿಲ್ ಕಿಡಿಕಾರಿದ್ದಾರೆ.
ಮುಂಬೈ ಘಟನೆಯನ್ನು ತೀವ್ರವಾಗಿ ಖಂಡಿಸಿದ ಗಿಲ್, ಪಾಕಿಸ್ತಾನದ ಒಂದು ತಂಡ ಮುಂಬೈ ಮಹಾನಗರದ ದಾಳಿ ನಡೆಸಿ ಅಮಾಯಕರ ಜನರನ್ನು ಸಾಮೂಹಿಕವಾಗಿ ಹತ್ಯೆಗೈಯತೊಡಗಿದೆ, ಪಾಕಿಸ್ತಾನ ಸೇನೆಯ ಕೈವಾಡವಿರುವುದು ತಿಳಿದಿದೆ. ಆದರೂ ಆ ದೇಶದ ಸರ್ಕಾರ ಉಗ್ರ ವಿರುದ್ಧ ಕ್ರಮಕೈಗೊಳ್ಳವಲ್ಲಿ ಹಿಂದೇಟು ಹಾಕುತ್ತಿದೆ.
ಇಂತಹ ಸನ್ನಿವೇಶದಲ್ಲಿ ಪಾಕಿಸ್ತಾನಕ್ಕೆ ಭಾರತೀಯ ಕ್ರಿಕೆಟ್ ತಂಡ ಕ್ರೀಡಾ ಸ್ಪೂರ್ತಿಯಿಂದ ಆಟ ಆಡಲಿದೆ ಎನ್ನುವ ಗ್ಯಾರಂಟಿ ನಮಗಿಲ್ಲ. ಅದ್ದರಿಂದ ಪ್ರವಾಸ ಬೇಡ ಎಂದು ಗಿಲ್ ಸ್ಪಷ್ಟವಾಗಿ ಹೇಳಿದರು.
(ದಟ್ಸ್ ಕನ್ನಡ ಕ್ರಿಕೆಟ್ ವಾರ್ತೆ)


Click it and Unblock the Notifications
