ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತನ್ನಿ
ರಾಯಚೂರು, ಡಿ. 12 : ಒಂದು ಪಕ್ಷದಿಂದ ಆಯ್ಕೆಯಾದ ಶಾಸಕರು ಅವಧಿ ಮುಗಿಯುವವರೆಗೂ ಪಕ್ಷಾಂತರ ಮಾಡದಂತಹ 'ಪಕ್ಷಾಂತರ ನಿಷೇಧ' ಕಾಯ್ದೆಯನ್ನು ಜಾರಿಗೆ ತರುವಂತೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗವನ್ನು ಒತ್ತಾಯಿಸಿದರು.
ರಾಯಚೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಾಂತರದಿಂದಾಗಿ ವಿಧಾನಸಭೆ ಚುನಾವಣೆಗಳು ಕಳೆದ ಮೂರು ತಿಂಗಳು ಆಗಿಲ್ಲ, ಮತ್ತೆ ಚುನಾವಣೆ ಎದುರಿಸುವ ಅನಿವಾರ್ಯ ಪ್ರಸಂಗ ಎದುರಾಗಿದೆ ಎಂದರು. ಅಧಿಕಾರದ ಆಸೆಗಾಗಿ ಆಯ್ಕೆಯಾದ ಶಾಸಕರನ್ನು ಪಕ್ಷಾಂತರ ಮಾಡುತ್ತಿರುವುದು ಖಂಡನೀಯ ಕೆಲಸ. ಈ ಅವಾಂತರದಿಂದ ಮತ್ತೆ ಚುನಾವಣೆಗೆ ಎದುರಿಸಬೇಕಾಗುತ್ತದೆ ಆಕ್ರೋಶ ವ್ಯಕ್ತಪಡಿಸಿದರು.
ಈ ಚುನಾವಣೆಯಿಂದ ಸಾರ್ವಜನಿಕ ಹಣವನ್ನು ವಿನಾಕಾರಣ ಹಾಳು ಮಾಡಿದಂತಾಗುತ್ತದೆ ಎಂದು ಕಿಡಿಕಾರಿ ಗೌಡರು, ಈ ಹಿನ್ನೆಲೆಯಲ್ಲಿ ಕೂಡಲೇ ಅಂತಹ ಅಕ್ರಮ ಪಕ್ಷಾಂತರಕ್ಕೆ ಕಡಿವಾಣ ಹಾಕಲು ನೂತನ ಕಾನೂನು ಅವಶ್ಯ ಎಂದು ಪ್ರತಿಪಾದಿಸಿದರು. ಮರುಚುನಾವಣೆಯ ಎಂಟೂ ಕ್ಷೇತ್ರಗಳಲ್ಲಿ ಜೆಡಿಎಸ್ ಜಯಭೇರಿ ಬಾರಿಸಲಿದೆ ಎಂದು ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಯುಪಿಎ ಸರ್ಕಾರ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಜನವಿರೋಧಿ ನೀತಿ ಅನುಸರಿಸುತ್ತಿರುವ ಕೇಂದ್ರಕ್ಕೆ ಲೋಕಸಭೆ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ದೇವೇಗೌಡ ಗುಡುಗಿದರು. ದೇಶದಲ್ಲಿ ಇಂದು ತೃತೀಯ ರಂಗದ ಅವಶ್ಯಕತೆ ಇದ್ದು, ಇದನ್ನು ಇನ್ನಷ್ಟು ಗಟ್ಟಿಗೊಳಿಸುವ ಪ್ರಯತ್ನವನ್ನು ಮುಂದುವರೆಸಲಾಗುವುದು ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಅನಿತಾ ಸ್ಪರ್ಧೆಗೆ ದೇವೇಗೌಡ ಸಮರ್ಥನೆ


Click it and Unblock the Notifications
