ಚಿರತೆ ಚರ್ಮ ಜಾಲ ಪತ್ತೆ, 3 ಬಂಧನ
ಬೆಂಗಳೂರು, ಡಿ. 11 : ನಗರದ ಮೆಜೆಸ್ಟಿಕ್ ಪ್ರದೇಶದಲ್ಲಿ ಚಿರತೆ ಚರ್ಮವನ್ನು ಮಾರಾಟ ಮಾಡುತ್ತಿದ್ದ ಮೂವರು ಉಪ್ಪಾರ ಪೇಟೆ ಪೊಲೀಸರು ಬಂಧಿಸಿ ಸುಮಾರು 20 ಲಕ್ಷ ರುಪಾಯಿಗಳ ಮೌಲ್ಯದ ಚಿರತೆ ಚರ್ಮವನ್ನು ವಶಪಡಿಸಿಕೊಂಡಿರುವ ಘಟನೆ ಗುರುವಾರ ನಡೆದಿದೆ.
ಮೊಹ್ಮದ್ ಅಸೀನ್, ಮೊಹ್ಮದ್ ಅಲಿ ಮತ್ತು ಮೊಹ್ಮದ್ ಬರ್ದನ್ ಬಂಧಿತ ಆರೋಪಿಗಳಾಗಿದ್ದಾರೆ. ಈ ಮೂವರು ಆರೋಪಿಗಳು ಚಿತ್ರ ದುರ್ಗದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ಮೆಜೆಸ್ಟಿಕ್ ಪ್ರದೇಶದಲ್ಲಿ ಚಿರತೆ ಮಾರಾಟ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಪೊಲೀಸರಿಗೆ ಸುದ್ದಿ ತಿಳಿದಿತ್ತು. ಆದರೆ ವಿವರವಾದ ಮಾಹಿತಿ ಲಭ್ಯವಾಗಿರಲಿಲ್ಲ. ಇಂದು ಬೆಳಗ್ಗೆ ದೊರೆತ ಮಾಹಿತಿ ಮೇರೆಗೆ ದಾಳಿ ನಡೆಸಿದ ಉಪ್ಪಾರಪೇಟೆ ಪೊಲೀಸರು ಮೂವರನ್ನು ಬಂಧಿಸಿ 20 ಲಕ್ಷ ರುಪಾಯಿ ಬೆಲೆ ಬಾಳುವ ಚಿರತೆ ಚರ್ಮವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಭಾರತದಲ್ಲಿ ಹುಲಿಗಳ ಸಂಖ್ಯೆ1500 ಮಾತ್ರ
ಸಿಸಿಬಿ ಬಲೆಗೆ ಬಿದ್ದ ವನ್ಯಜೀವಿ ಚರ್ಮ ಮಾರಾಟ ಜಾಲ
ಶಿವಮೊಗ್ಗ: ಹಕ್ಕಿಪಿಕ್ಕಿಗಳ ಸೆರೆ, ಪ್ರಾಣಿಗಳ ಚರ್ಮ ವಶ


Click it and Unblock the Notifications
