ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೊಮಾಲಿ ಕಡಲ್ಗಳ್ಳರಿ೦ದ ಮತ್ತೆ ಹಡಗು ಅಪಹರಣ

By Staff
|
Google Oneindia Kannada News

ನವದೆಹಲಿ, ಡಿ. 11 : ಗಲ್ಫ್ ಆಫ್ ಆಡೆನ್ ಸಮುದ್ರದಲ್ಲಿ ಮತ್ತೆರಡು ಯೆಮನ್ ದೇಶದ ಮೀನುಗಾರಿಕಾ ಹಡಗನ್ನು ಸೊಮಾಲಿ ಕಡಲ್ಗಳ್ಳರು ಬುಧವಾರ ತಡರಾತ್ರಿ ಅಪಹರಿಸಿದ್ದಾರೆ ಎಂದು ಯೆಮನ್ ದೇಶದ ಸಚಿವರೊಬ್ಬರು ತಿಳಿಸಿದ್ದಾರೆ. ಹಡಗಿನಲ್ಲಿ 22 ಜನ ಮೀನುಗಾರರು ಇದ್ದರು ಎನ್ನಲಾಗಿದೆ.

29 ಜನ ಇದ್ದ ಹಡಗಿನಲ್ಲಿ ಅಪಹರಣದ ಸುಳಿವು ಸಿಗುತ್ತಿದ್ದಂತೆ 7 ಜನ ಮೀನುಗಾರರು ಹಡಗಿನಿಂದ ಹಾರಿ ಯೆಮನ್ ಕರಾವಳಿ ಭದ್ರತಾ ಪಡೆಗೆ ವಿಷಯ ತಿಳಿಸಿದ್ದಾರೆ. ಈ ಹಡಗು ಜರ್ಮನಿ ದೇಶದ ಸುಮಾರು 370 ಪ್ರಯಾಣಿಕರನ್ನು ಯೆಮನ್ ಬಂದರಿನಲ್ಲಿ ಇಳಿಸಿ 29 ಮೀನುಗಾರರೊಂದಿಗೆ ಒಮಾನ್ ದೇಶದ ಕಡೆ ಪ್ರಯಾಣ ಬೆಳೆಸಿತ್ತು.

ಹೋದ ವಾರವಷ್ಟೆ ಇದೇ ದೇಶದ ಹಡಗನ್ನು ಅಪಹರಿಸಿದ್ದ ಕಡಲ್ಗಳ್ಳರು ಒತ್ತೆ ಹಣವಾಗಿ ಸುಮಾರು 2 ಮಿಲಿಯನ್ ಅಮೆರಿಕನ್ ಡಾಲರ ಕೇಳಿದ್ದರು. ಆದರೆ ಯಾವುದೇ ಹಣ ನೀಡದೆ ಮಾತುಕತೆ ಮೂಲಕ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲಾಗಿತ್ತು ಎಂದು ಯೆಮನ್ ಅಧಿಕಾರಿಗಳು ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X