ಭಯೋತ್ಪಾದನೆಗೆ ಯುದ್ಧ ಮದ್ದಲ್ಲ;ಪ್ರಣಬ್
ನವದೆಹಲಿ, ಡಿ. 11 : ಪಾಕಿಸ್ತಾನದ ಮೇಲೆ ದಾಳಿ ನಡೆಸಿದರೆ ಭಯೋತ್ಪಾದನೆ ಪರಿಹಾರವಾಗಲಿದೆ ಎನ್ನುವುದು ಅಸಾಧ್ಯದ ಮಾತು ಎಂದು ಕೇಂದ್ರದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಲೋಕಸಭೆಯಲ್ಲಿಂದು ಸ್ಪಷ್ಟಪಡಿಸಿದರು.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಾಕಿಸ್ತಾನದ ಮೇಲೆ ಯುದ್ಧ ಸಾರುವುದರಿಂದ ಯಾವುದೇ ಪ್ರಯೋಜನವಾಗುವದಿಲ್ಲ. ಅದರ ಬದಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮತನವನ್ನು ಗಟ್ಟಿ ಮಾಡಿಕೊಂಡು ಪಾಕಿಸ್ತಾನದ ಸಾಕಷ್ಟು ಒತ್ತಡ ತಂದು, ಆ ಮೂಲಕ ಪಾಕಿಸ್ತಾನದಲ್ಲಿ ಅಡಿಗಿರುವ ಉಗ್ರ ಹಾಗೂ ಉಗ್ರ ಸಂಘಟನೆಗಳನ್ನು ಸೆದೆಬಡಿಯಬೇಕಾಗಿದೆ ಎಂದು ಪ್ರಣಬ್ ಸ್ಪಷ್ಟಪಡಿಸಿದರು.
ಮುಂಬೈ ಭಯೋತ್ಪಾದನೆ ಸಂಬಂಧಿಸಿದಂತೆ ಮಾತನಾಡಿದ ಮುಖರ್ಜಿ, ಕ್ಷಣ ಕ್ಷಣಕ್ಕೂ ಪಾಕಿಸ್ತಾನ ಸರ್ಕಾರ ಆಡುತ್ತಿರುವ ನಾಟಕವನ್ನು ತೀವ್ರವಾಗಿ ಖಂಡಿಸಿದರು. ಪಾಕಿಸ್ತಾನದಲ್ಲಿರುವ ಉಗ್ರರನ್ನು ಮೊದಲು ಮಟ್ಟಹಾಕಿ, ಆಮೇಲೆ ಭಾರತದ ಮೇಲೆ ಯುದ್ಧ ಮಾಡುವ ಕುರಿತು ಮಾತನಾಡಿ ಎಂದು ಪಾಕ್ ಗೆ ಎಚ್ಚರಿಕೆ ನೀಡಿದರು. ಬುಧವಾರ ಪಾಕ್ ವಿದೇಶಾಂಗ ಸಚಿವ ಖುರೇಶಿ ಪ್ರತಿಕ್ರಿಯಿಸಿ, ಭಾರತದ ಮೇಲೆ ಯುದ್ಧಕ್ಕೂ ಎನ್ನುವ ಹೇಳಿಕೆಯನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಣಬ್ ತೀವ್ರ ವ್ಯಘ್ರವಾಗಿ ಅವರ ಮಾತಿಗೆ ಉತ್ತರಿಸಿದರು.
ಪಾಕಿಸ್ತಾನ ಭಯೋತ್ಪಾದಕರ ತವರು ಮನೆ ಎಂದು ಕಿಚಾಯಿದರಲ್ಲದೇ ಭಾರತಕ್ಕೆ ಬೇಕಿರುವ ಮೊಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಮ್ ನನ್ನು ಸಾಕಿ ಬೆಳೆಸುತ್ತಿರುವುದು ಜಗತ್ತಿಗೆ ಗೊತ್ತಿದೆ. ನೀತಿ ಪಾಠ ಹೇಳುವುದನ್ನು ಬಿಡಬೇಕು. ಪಾಕಿಸ್ತಾನದಲ್ಲಿ 40 ಮಂದಿ ಭಯೋತ್ಪಾದಕರನ್ನು ಶೀಘ್ರದಲ್ಲಿ ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಪ್ರಣಬ್ ಪಾಕಿಸ್ತಾನಕ್ಕೆ ಆಗ್ರಹಿಸಿದರು.
(ದಟ್ಸ್ ಕನ್ನಡ ವಾರ್ತೆ)
ಪಾಕ್ ಉಗ್ರರ ಸ್ವರ್ಗ:ಅಡ್ವಾಣಿ
ಜಮಾತೆ ಉದ್ ದವಾಕ್ಕೆ ನಿಷೇಧ: ವಿಶ್ವಸಂಸ್ಥೆ


Click it and Unblock the Notifications
