ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ. 24ರ ವರೆಗೆ ಪೊಲೀಸರ ಕೈಯಲ್ಲಿ ಕಸಬ್

By Staff
|
Google Oneindia Kannada News

ಮುಂಬೈ, ಡಿ. 11 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿ ಬಿದ್ದ ಪಾಕ್ ಬೆಂಬಲಿತ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ನನ್ನುಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿಬೇಕಿತ್ತು. ಆದರೆ ಭದ್ರತೆ ದೃಷ್ಟಿಯಿಂದ ಡಿ.24 ರ ವರೆಗೆ ಪೊಲೀಸ್ ಬಂಧನವನ್ನು ಮುಂದುವರೆಸಲಾಗಿದೆ.

ಇಂದು ಕಸಬ್ ನನ್ನು ಮುಂಬೈನ ದಕ್ಷಿಣ ನ್ಯಾಯಾಲಯದ ವಶಕ್ಕೆ ನೀಡಬೇಕಿತ್ತು. ಆದರೆ ಭದ್ರತೆ ಕಾರಣಗಳಿಂದ ಕಸಬ್ ನನ್ನು ಡಿ 24 ವರೆಗೆ ಪೊಲೀಸ್ ಬಂಧನದಲ್ಲಿ ಮುಂದವರೆಸಲಾಗಿದೆ ಎಂದು ಮುಂಬೈ ಅಪರಾಧ ವಿಭಾಗ ಪೊಲೀಸ್ ಆಯಕ್ತ ರಾಕೇಶ್ ಮಾರಿಯಾ ಸ್ಪಷ್ಟಪಡಿಸಿದ್ದಾರೆ. ಕಸಬ್ ನನ್ನು ಇಂದು ನ್ಯಾಯಾಲಯಕ್ಕೆ ಒಪ್ಪಿಸಬಹುದಿತ್ತು. ಆದರೆ ಮಾದ್ಯಮಗಳು ಈಗಾಗಲೇ ಈ ವಿಷಯವನ್ನು ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಭದ್ರತೆಗೆ ತೊಡಕುಂಟಾಗುವ ಸಾಧ್ಯತೆಗಳನ್ನು ಮನಗಂಡು ನ್ಯಾಯಾಲಯಕ್ಕೆ ಒಪ್ಪಿಸಲು ಸಾಧ್ಯವಾಗಿಲ್ಲ ರಾಕೇಶ್ ಮರಿಯಾ ಸ್ಪಷ್ಟಪಡಿಸಿದ್ದಾರೆ.

ಕಸಬ್ ಇದೀಗ ಮುಂಬೈ ಅಪರಾಧ ವಿಭಾಗದ ಸುಪರ್ದಿಯಲ್ಲಿದ್ದಾನೆ. ಮುಂಬೈ ಭಯೋತ್ಪಾದನೆ ದಾಳಿಯಲ್ಲಿ ನಗರದ ಚೌಪಟ್ಟಿ ಬಳಿ ಈತನ ಸ್ನೇಹಿತ ಇಸ್ಮಾಯಿಲ್ ಜತೆ ಇರುವಾಗ ಸಿಕ್ಕಿಬಿದ್ದಿದ್ದಾನೆ. ಅದರೆ ಉಗ್ರ ಇಸ್ಮಾಯಿಲ್ ದಾಳಿಯಲ್ಲಿ ಹತನಾಗಿದ್ದ. ಕಸಬ್ ವಿರುದ್ದ ಮುಂಬೈ ಅಪರಾಧ ವಿಭಾಗದ ಪೊಲೀಸರು ಒಟ್ಟು 12 ಪ್ರಕರಣ ದಾಖಲಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)
ಉಗ್ರರೆಲ್ಲರೂ ಪಾಕಿಗಳು, ಮುಂಬೈ ಪೊಲೀಸ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X