ಭಾರತ ಜಗತ್ತಿನ 4ನೇ ಭ್ರಷ್ಟ ರಾಷ್ಟ್ರ
ಬೆಂಗಳೂರು, ಡಿ. 11 : ಅತ್ಯಂತ ಹೆಚ್ಚು ಲಂಚ ಪಾವತಿಸುವ ಜಗತ್ತಿನ ಭ್ರಷ್ಟ ರಾಷ್ಟ್ರಗಳ ಸಾಲಿನಲ್ಲಿ ಭಾರತ 4ನೇ ಸ್ಥಾನದಲ್ಲಿದೆ ಎನ್ನುವ ಸಮೀಕ್ಷೆಯನ್ನು ಟ್ರಾನ್ಸ್ ಪರೆನ್ಸ್ ಇಂಟರ್ನ್ಯಾಷನಲ್ ಎನ್ನುವ ಸಂಸ್ಥೆ ನೀಡಿದೆ. ವಿದೇಶಗಳಲ್ಲಿ ವ್ಯವಹಾರ ಕುದುರಿಸಬೇಕದಾಗ ಭಾರತದ ಕಂಪೆನಿಗಳು ಮತ್ತು ಉದ್ಯಮಿಗಳು ಲಂಚದ ಭ್ರಷ್ಟ ಹಾದಿ ತುಳಿಯುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ ಎಂದು ತನ್ನ ಸಮೀಕ್ಷೆಯಲ್ಲಿ ಪ್ರಕಟಿಸಿದೆ.
ಈ ಸಂಸ್ಥೆ ಅತ್ಯಂತ ಹೆಚ್ಚು ಲಂಚ ಪಾವತಿಸುವ 22 ರಾಷ್ಟ್ರಗಳ ಪಟ್ಟಿಯನ್ನು ತಯಾರಿಸಿದ್ದು, ಮೊದಲ ಮೂರು ಸ್ಥಾನದಲ್ಲಿ ರಷ್ಯ, ಚೀನಾ, ಮೆಕ್ಸಿಕೋ ಮತ್ತು ನಾಲ್ಕನೇ ಸ್ಥಾನದಲ್ಲಿ ಭಾರತ ಇದೆ. ನೆದರ್ಲ್ಯಾಂಡ್ ಮತ್ತು ಸ್ವಿಜರಲ್ಯಾ೦ಡ ಅತಿ ಕಡಿಮೆ ಲಂಚ ಪಾವತಿಸುವ ದೇಶ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
