ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ: ಅಕ್ರಮ ಪಿಸ್ತೂಲು ಮಾರಾಟ ಜಾಲ FIR

By Staff
|
Google Oneindia Kannada News

Udupi: illegal selling of Pistols two held
ಉಡುಪಿ, ಡಿ. 11:ಅಕ್ರಮವಾಗಿ ಪಿಸ್ತೂಲ್ ಮಾರಾಟ ಜಾಲವನ್ನು ಬೇಧಿಸಿದ ಸ್ಥಳೀಯ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರೆದಿದ್ದು, ಬಂಧಿತರ ಹಿನ್ನೆಲೆಯ ವಿಚಾರಣೆ ನಡೆದಿದೆ ಎಂದು ಜಿಲ್ಲಾ ಎಸ್ ಪಿ ಪ್ರವೀಣ್ ಪವಾರ್ ಹೇಳಿದರು.

ಬುಧವಾರ ಬೆಳಗ್ಗಿನ ಜಾವ ಖಚಿತ ಮಾಹಿತಿ ಮೇರೆಗೆ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ 4 ಪಿಸ್ತೂಲ್‌ಗಳನ್ನು ಹೊಂದಿದ್ದ ಇಬ್ಬರು ಮಧ್ಯಪ್ರದೇಶ ಮೂಲದ ಯುವಕರನ್ನು ಉಡುಪಿ ಜಿಲ್ಲಾ ಅಪರಾಧ ಪತ್ತೆದಳದ ಇನ್ಸ್‌ಪೆಕ್ಟರ್ ಬಿ.ಎಸ್.ಶ್ರೀನಿವಾಸರಾಜ್ ಹಾಗೂ ಸಿಬ್ಬಂದಿಯವರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರು ಮಧ್ಯಪ್ರದೇಶದ ಜಬಲ್‌ಪುರ ನಿವಾಸಿ ದೀಪಕ್ ಕುಮಾರ್ ಪಾಂಡೆ(24) ಮತ್ತು ತಿಲಕ್‌ವಾಡಿಯ ನಿವಾಸಿ ಸಾಗರ್ ಪಟೇಲ್(23) ಎಂದು ಗುರುತಿಸಲಾಗಿದ್ದು, ಬಂಧಿತರಿಂದ ದೇಶೀಯ ಹಾಗೂ ವಿದೇಶಿ ನಿರ್ಮಿತ ನಾಲ್ಕು ಪಿಸ್ತೂಲ್ ಹಾಗೂ 12 ಜೀವಂತ ಗುಂಡುಗಳನ್ನು ಮತ್ತು 2 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ ಮೂರುವರೆ ಲಕ್ಷ ರುಪಾಯಿಗಳು ಎಂದು ಅಂದಾಜಿಸಲಾಗಿದೆ. ಆರೋಪಿಗಳು ಕರಾವಳಿ ಜಿಲ್ಲೆಗಳಲ್ಲಿ ಅಧಿಕ ಮೌಲ್ಯಕ್ಕೆ ಪಿಸ್ತೂಲ್‌ಗಳನ್ನು ಮಾರಾಟ ಮಾಡುವ ಉದ್ದೇಶದಿಂದ ತಂದಿರುವ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಭೂಗತ ಚಟುವಟಿಕೆಗಳ ಸಂಪರ್ಕವಿದೆಯೇ ಎನ್ನುವುದರ ಬಗ್ಗೆ ತೀವ್ರವಾಗಿ ವಿಚಾರಣೆ ಕೈಗೊಳ್ಳಲಾಗಿದೆ.

ಈ ಕಾರ್ಯಾಚರಣೆಯನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಮಧುಕರ್ ಪವಾರ್‌ರವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಂ.ಎನ್.ನಾಗರಾಜ್‌ರವರ ನಿರ್ದೇಶನದಲ್ಲಿ, ಉಡುಪಿ ಜಿಲ್ಲಾ ಅಪರಾಧ ಪತ್ತೆದಳದ ಇನ್ಸ್‌ಪೆಕ್ಟರ್ ಬಿ.ಎಸ್.ಶ್ರೀನಿವಾಸರಾಜ್ ಹಾಗೂ ಸಿಬ್ಬಂದಿಯವರಾದ ದಾಮೋದರ್, ನಾರಾಯಣ, ಮಹಾಬಲ ಶೆಟ್ಟಿ, ಸತೀಶ್‌ಬಲ್ಲಾಳ್, ದಿನೇಶ್‌ಶೆಟ್ಟಿ, ಉದಯ ಕುಂದರ್, ರತ್ನಾಕರ್, ವಾಮನ, ಪುಷ್ಪರಾಜ್, ಮನೋಹರ್ ಉದ್ಯಾವರ್‌ರವರು ನಡೆಸಿದರು.

ಇತ್ತೀಚೆಗೆ ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಭಯೋತ್ಪಾಕರ ನುಸುಳುವಿಕೆ ಹೆಚ್ಚಾಗಿದೆ. ಇತ್ತೀಚೆಗೆ ಉಳ್ಳಾಲದಲ್ಲಿ ಉಗ್ರರನ್ನು ಬಂಧಿಸಿದ ನಂತರ ತೀವ್ರ ತನಿಖೆ ನಡೆಸಲಾಗುತ್ತಿದೆ. ಪಿಸ್ತೂಲ್ ಮಾರಾಟ ಜಾಲದಲ್ಲಿ ಬಂಧಿತ ಆರೋಪಿಗಳು ಇಲ್ಲಿಗೆ ಏಕೆ ಬಂದಿದ್ದರು. ಅಕ್ರಮವಾಗಿ ಪಿಸ್ತೂಲಗಳನ್ನು ಏಕೆ ಮಾರಾಟದಲ್ಲಿ ತೊಡಗಿದ್ದರು ಎನ್ನುವ ಅನೇಕ ವಿಷಯಗಳು ಸದ್ಯದಲ್ಲೇ ಬಹಿರಂಗವಾಗಲಿದೆ ಎಂದು ಉಡುಪಿ ಎಸ್ ಪಿ ಪ್ರವೀಣ್ ಪವಾರ್ ಹೇಳಿದರು.
(ಉಡುಪಿ ಪೊಲೀಸ್ ವರದಿ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X