ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಳಿಹಟ್ಟಿ ಶೇಖರ್ ರಾಜೀನಾಮೆ ನಾಟಕ

By Staff
|
Google Oneindia Kannada News

ಬೆಂಗಳೂರು, ಡಿ. 11 : ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾಗಿರುವ ಪಕ್ಷೇತರ ಸಚಿವರಿಗೆ ಅನುದಾನ ನೀಡುವಲ್ಲಿ ಮುಖ್ಯಮಂತ್ರಿಯವರು ತಾರತಮ್ಯ ಮಾಡುತ್ತಿದ್ದಾರೆ. ತಮ್ಮ ಇಲಾಖೆ ಅನುದಾನ ನೀಡಲು ಕೆಲ ಅಧಿಕಾರಿಗಳ ವರ್ಗಾವಣ ಮಾಡಲು ನಿಕಾರಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಜವಳಿ, ಯುವಜನ ಮತ್ತು ಕ್ರೀಡಾ ಖಾತೆ ಸಚಿವ ಗೂಳಿಹಟ್ಟಿ ಶೇಖರ್ ಆಕ್ರೋಶ ವ್ಯಕ್ತಪಡಿಸಿ, ಫೈಲ್ ಗಳನ್ನು ಹರಿದು ಹಾಕಿ ಸರ್ಕಾರಿ ವಾಹನ ಬಿಟ್ಟು ಅಟೋದಲ್ಲಿ ತೆರಳಿದ ಪ್ರಸಂಗ ಬುಧವಾರ ಜರುಗಿದೆ.

ಅಮೆರಿಕಾದ ಮಿಚಿಗನ್ ರಾಜ್ಯದ ಸಗಿನಾವ್ ಸ್ಟೇಟ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಲು ಅಮೆರಿಕಕ್ಕೆ ತೆರಳಲು ಮುಖ್ಯಮಂತ್ರಿಗಳು ಸಿದ್ಧತೆ ನಡೆಸುತ್ತಿರುವಾಗ ಬೆಂಗಳೂರಿನ ಕೃಷ್ಣಾ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಸಚಿವ ಗೊಳಿಹಟ್ಟಿ ಶೇಖರ್ ಬಜೆಟ್ ನಲ್ಲಿ 60 ಕೋಟಿ ರುಪಾಯಿ ಅನುದಾನ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಆದರೆ 43 ಕೋಟಿ ರುಪಾಯಿ ಅನುದಾನ ಮಾತ್ರವೇ ಸಿಕ್ಕಿತ್ತು. ಅನುದಾನ ಪ್ರಮಾಣವನ್ನು ಹೆಚ್ಚಿಸಿ ಅನೇಕ ಮನವಿ ಮಾಡಿಕೊಂಡಿದ್ದರೂ ಫಲಕಾರಿಯಾಗಿರಲಿಲ್ಲ.

ಇದರ ಜೊತೆಗೆ ತಮ್ಮ ಕ್ಷೇತ್ರದ ಹೊಸದುರ್ಗದಲ್ಲಿ ಇತ್ತೀಚೆಗೆ ಕನಕ ಜಯಂತಿ ಸಂದರ್ಭದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಸಬ್ ಇನ್ಸ್ ಪೆಕ್ಟರ್, ಇನ್ಸ್ ಪೆಕ್ಟರ್ ಹಾಗೂ ಡಿವೈಎಸ್ಪಿ ಯನ್ನು ವರ್ಗಾವಣೆ ಮಾಡುವ ಎಂದು ಸಿಎಂ ಗೆ ಪ್ರಸ್ತಾವನೆ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಗ ಬೇಸತ್ತ ಗೂಳಿಹಟ್ಟಿ ಶೇಖರ್ ಮುನಿಸಿಕೊಂಡು ಸರ್ಕಾರಿ ವಹಾನ ಬಿಟ್ಟು ಅಟೋ ತೆರೆಳಿದ್ದಾರೆ.

ವಿದೇಶದಿಂದ ಬಂದ ನಂತರ ಫೈಲ್ ಗಳನ್ನು ನೋಡುತ್ತೇನೆ ಎಂದು ಯಡಿಯೂರಪ್ಪ ಹೇಳಿಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶೇಖರ್, ನಮ್ಮಿಂದ ನೀವು ಮುಖ್ಯಮಂತ್ರಿ ಆಗಿರುವುದು. ನಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಇದು ಹೀಗೆ ಮುಂದುವರೆದರೆ ಸರ್ಕಾರದಲ್ಲಿ ಇರಲು ಆದುವುದಿಲ್ಲ. ನಾನು ರಾಜೀನಾಮೆ ಕೊಡುತ್ತೇನೆ ಎಂದು ನೇರವಾಗಿ ಯಡಿಯೂರಪ್ಪ ಅವರಿಗೆ ತಿಳಿಸಿದ್ದಾರೆ. ಆದರೆ ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ತುಟಿಪಿಟ್ಟೆಂದಿಲ್ಲ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X