ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈ ಟೆಸ್ಟ್ - ಇಂಗ್ಲೆಂಡ್ 229ಕ್ಕೆ 5

By Staff
|
Google Oneindia Kannada News

ಚೆನ್ನೈ, ಡಿ. 11 : ಅಡ್ರ್ಯೂ ಸ್ಟ್ರಾಸ್ ಅವರ ಆಕರ್ಷಕ ಶತಕದ ನೆರವಿನಿಂದ ಇಲ್ಲಿನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲನೆ ಟೆಸ್ಟ್ ನ ಮೊದಲನೆ ದಿನದ ಆಟ ಮುಗಿದಾಗ ಇಂಗ್ಲೆಂಡ್ 5 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಪ್ಲಿಂಟಾಫ್ 18 ಮತ್ತು ಆಂಡರ್ಸನ್ 2 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ಆರಂಭಿಕ ಆಟಗಾರರಾದ ಕುಕ್ ಮತ್ತು ಸ್ಟ್ರಾಸ್ 118 ರನ್ ಗಳ ಉತ್ತಮ ಆರಂಭ ನೀಡಿದರು. ಸ್ಟ್ರಾಸ್ 123 ರನ್ ಗಳಿಸಿ ಔಟಾದರು. ಇಂಗ್ಲೆಂಡ್ ಪರ ಕುಕ್ 52, ಬೆಲ್ 17, ಪೀಟರ್ ಸನ್ 4, ಕಾಲಿಂಗ್ ಹುಡ್ 9 ರನ್ ಗಳಿಸಿ ಔಟಾದರು. ಭಾರತದ ಪರ ಜಹೀರ್ ಖಾನ್ ಮತ್ತು ಹರಭಜನ್ ಸಿಂಗ್ ತಲಾ ಎರಡು ವಿಕೆಟ್ ಪಡೆದರೆ, ಅಮಿತ್ ಮಿಶ್ರ ಒಂದು ವಿಕೆಟ್ ಪಡೆದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X