ಸುವರ್ಣ ಟಿವಿಯಲ್ಲಿ ಸಿಇಟಿ ತರಬೇತಿ
ಬೆಂಗಳೂರು, ಡಿ. 11 : ನಗರದ ಚಿಪ್ಸ್ ಐಐಟಿ ಸಂಸ್ಥೆಯು ಸಿಇಟಿ ತರಬೇತಿ ಕುರಿತಂತೆ ದೀಕ್ಷಾ ಕಾರ್ಯಕ್ರಮವನ್ನು ಸಿದ್ಧಪಡಿಸಿದ್ದು, ಏಷಿಯಾನೆಟ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಡಿ. 13 ರಿಂದ ಪ್ರತಿ ಶನಿವಾರ, ಭಾನುವಾರ ಹಾಗೂ ಸೋಮವಾರ ಬೆಳಗ್ಗೆ 6 ರಿಂದ 7 ಗಂಟೆ ವರೆಗೆ 15 ಕಂತುಗಳಲ್ಲಿ ಪ್ರಸಾರವಾಗಲಿದೆ.
ಕಾರ್ಯಕ್ರಮದಲ್ಲಿ ತಜ್ಞ ಉಪನ್ಯಾಸಕರು ಪಾಲ್ಗೊಳ್ಳುವರು. ಇದರಲ್ಲಿ ಕನ್ನಡ, ಇಂಗ್ಲಿಷ್ ಭಾಷೆಗಳೊಂದಿಗೆ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಲಾಗುವುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 94496-59072
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
