ನೂತನ ಪಕ್ಷ ರಚನೆಯಲ್ಲಿ ಸಿದ್ದರಾಮಯ್ಯ ?
ಮೈಸೂರು, ಡಿ. 11 : ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ಪಕ್ಷ ಕಟ್ಟಲು ಸಜ್ಜಾಗಿದ್ದಾರೆ. ಅದರ ಕರ್ನಾಟಕ ಜನತಾದಳ. ಹೀಗೊಂದು ಸುದ್ದಿ ದಟ್ಟವಾಗಿದೆ. ಜನವರಿಯೊಳಗೆ ಪಕ್ಷ ಉದಯಿಸಲಿದ್ದು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಗಳಿವೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಕಾಂಗ್ರೆಸ್ ನಲ್ಲಿ ಮೂಲೆಗುಂಪಾಗಿರುವ ಸಿದ್ದರಾಮಯ್ಯ ಲೋಕಸಭೆಗೆ ಮುಂಚೆ ನೂತನ ಪಕ್ಷಕ್ಕೆ ಚಾಲನೆ ನೀಡುವುದು ಬಹುತೇಕ ಖಚಿತವಾಗಿದೆ ಅವರ ನಿಕಟ ಮೂಲಗಳಿಂದ ತಿಳಿದಿದೆ. ಕಾಂಗ್ರೆಸ್ ಸೇರಿ ಎರಡು ವರ್ಷ ಕಳೆದರೂ ಯಾವುದೇ ಪ್ರಯೋಜನೆ ಆಗಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಎರಡು ಸಲ ಶಾಸಕರಾಗಿ ಆಯ್ಕೆಯಾದರೂ ಸೂಕ್ತ ಸ್ಥಾನಮಾನ ದೊರೆತಿಲ್ಲ ಎನ್ನುವ ನೋವು ಸಿದ್ದು ಸೇರಿದಂತೆ ಅವರ ಅನುಯಾಯಿಗಳಲ್ಲಿ ಬಹುದಿನಗಳಿಂದ ಕಾಡುವ ಪ್ರಶ್ನೆಯಾಗಿದೆ.
ಸದ್ಯ ಚರ್ಚೆ ನಡೆಸಿದಂತೆ ಕರ್ನಾಟಕ ಜನತಾದಳ ಎನ್ನುವ ಪಕ್ಷ ರಚಿಸಬಹುದು. ಅದಕ್ಕೆ ಜನವರಿ ತಿಂಗಳು ಡೆಡ್ ಲೈನ್ ಆಗಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು 8 ರಿಂದ 10 ಲೋಕಸಭೆ ಸ್ಥಾನಗಳ ಬೇಡಿಕೆ. ಇದರಲ್ಲಿ ಕನಿಷ್ಠ 5 ಸ್ಥಾನಗಳಲ್ಲಿ ಗೆದ್ದು ಪಕ್ಷದ ಅಸ್ತಿತ್ವ ಉಳಿಸಿಕೊಳ್ಳುವ ಲೆಕ್ಕಾಚಾರ ಹಾಕಿದ್ದಾರೆ ಎನ್ನಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದು, ಹೊಸ ಪಕ್ಷವನ್ನು ಕಟ್ಟಬೇಕೆಂದು ಯೋಚನೆಯನ್ನು ಮಾಡಿಲ್ಲ. ಬೆಂಬಲಗರೊಂದಿಗೆ ಕುಳಿತು ಮಾತನಾಡಬೇಕು. ಈ ಬಗ್ಗೆ ನಂತರ ಹೇಳುತ್ತೇನೆ. ಅವರು ಏನು ಹೇಳುತ್ತಾರೆ ನೋಡೋಣ ಎಂದು ಕಾಂಗ್ರೆಸ್ ನಾಯಕರ ಕಡೆಗೆ ಬೊಟ್ಟು ಮಾಡಿದರು.
(ದಟ್ಸ್ ಕನ್ನಡ ವಾರ್ತೆ)
ಕುರುಬರಿಗಾಗಿ ಸಿದ್ದು ಬಿಜೆಪಿ ಜೊತೆ ಮೈತ್ರಿ


Click it and Unblock the Notifications
