ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ತಾನದಲ್ಲಿ ಕಮಲ ಧೂಳಿಪಟ

By Staff
|
Google Oneindia Kannada News

ನವದೆಹಲಿ, ಡಿ. 8 : 2008ರ ಮಿನಿ ಮಹಾಸಮರದ ಮತ ಎಣಿಕೆಗಳ ಕಾರ್ಯ ಅರ್ಧಕ್ಕೂ ಹೆಚ್ಚು ಮುಗಿಯುವ ಹಂತ ಬಂದು ತಲುಪಿದ್ದು, ರಾಜಸ್ತಾನದಲ್ಲಿ ಬಿಜೆಪಿ ಸೋಲು ಖಚಿತವಾಗಿದೆ. ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಶೋಕ್ ಗೆಹಲೋಟ್ ಮತ್ತೊಮ್ಮೆ ರಾಜಸ್ತಾನದ ಅಧಿಕಾರ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ.

ರಾಜಸ್ತಾನದ ಒಟ್ಟು 200 ಕ್ಷೇತ್ರಗಳಲ್ಲಿ 105 ಕ್ಷೇತ್ರಗಳನ್ನು ಕಾಂಗ್ರೆಸ್ ಮುನ್ನೆಡೆ ಸಾಧಿಸಿದೆ. ಆಡಳಿತರೂಢ ಬಿಜೆಪಿ 72 ಕ್ಷೇತ್ರಗಳಲ್ಲಿ ಮಾತ್ರ ಮುನ್ನೆಡೆ ಸಾಧಿಸಿದೆ. ಮುಖ್ಯಮಂತ್ರಿ ವಸುಂಧರಾ ರಾಜೇ ಜಲರಾ ಪಟ್ಟಣದಲ್ಲಿ ಮುನ್ನೆಡೆ ಕಾಯ್ದುಕೊಂಡಿದ್ದಾರೆ. ಅದರಂತೆ ಅಶೋಕ್ ಗೆಹಲೋಟ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಕಿರಣ್ ಮಹೇಶ್ವರಿ, ಘನಶ್ಯಾಮ್ ತಿವಾರಿ, ನಿಹಾಲ್ ಚಂದ್ ಮುನ್ನೆಡೆ ಉಳಿಸಿಕೊಂಡಿದ್ದಾರೆ.

ಮಿಜೋರಾಂನಲ್ಲಿ ಕಾಂಗ್ರೆಸ್ ಈಗಾಗಲೇ 10 ಸ್ಥಾನ ಖಚಿತ ಪಡಿಸಿಕೊಂದಿದೆ. 7ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಮಿಜೋ ನ್ಯಾಷನಲ್ ಫ್ರಂಟ್ ನ ಇಬ್ಬರು ಮುನ್ನೆಡೆಯಲ್ಲಿದ್ದಾರೆ. 40 ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಹುತೇಕ ಮುನ್ನೆಡೆ ಹೊಂದಿದೆ, ಮಿಜೋರಾಂ ಕೈ ವಶ ವಾಗುವ ಎಲ್ಲ ಲಕ್ಷಣಗಳಿವೆ.

90 ಕ್ಷೇತ್ರಗಳ ಛತ್ತೀಸ್ ಗಢ ವಿಧಾನಸಭೆಯ ಫಲಿತಾಂಶದಲ್ಲಿ ಸಮಬಲ ಸ್ಪರ್ಧೆ ಏರ್ಪಟ್ಟಿದೆ. ಆಡಳಿತ ರೂಢ ಬಿಜೆಪಿ 42 ಕ್ಷೇತ್ರದಲ್ಲಿ ಮುನ್ನೆಡೆ ಸಾಧಿಸಿದ್ದರೆ, ಕಾಂಗ್ರೆಸ್ 42ಕ್ಷೇತ್ರಗಳಲ್ಲಿ ಮುನ್ನೆಡೆ ಕಂಡುಕೊಂಡಿದೆ. ಮುಖ್ಯಮಂತ್ರಿ ರಮಣ್ ಸಿಂಗ್ 2200 ಮತಗಳ ಅಂತರದಲ್ಲಿ ಮುಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಅಜಿತ್ ಜೋಗಿ ಕೂಡಾ ಮತ್ತು ಅವರ ಪತ್ನಿ ರೇಣು ಜೋಗಿ ಮುನ್ನೆಡೆ ಕಾಯ್ದುಕೊಂಡಿದ್ದಾರೆ.

ಮಧ್ಯಪ್ರದೇಶದಲ್ಲಿ ಬಿಜೆಪಿ ಮತ್ತೆ ತನ್ನ ಪಾರುರತ್ಯವನ್ನು ಮುಂದುವೆರಸಿದೆ. 230 ಕ್ಷೇತ್ರಗಳಲ್ಲಿ 124 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನೆಡೆ ಸಾಧಿಸಿದೆ. 70 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನೆಡೆ ಸಾಧಿಸಿ ನೀರಸ ಪ್ರದರ್ಶನ ಕಂಡಿದೆ. ಮುಖ್ಯಮಂತ್ರಿ ಶಿವರಾದ್ ಸಿಂಗ್ ಪಾಟೀಲ್ ಮುನ್ನೆಡೆಯಲ್ಲಿದ್ದಾರೆ.

ಉಮಾಭಾರತಿ ಹಿನ್ನೆಡೆ

ತಿಲಂ ಗಢ ಕ್ಷೇತ್ರದಲ್ಲಿ ಭಾರತೀಯ ಜನಶಕ್ತಿ ಪಕ್ಷದ ನಾಯಕಿ ಉಮಾಭಾರತಿ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಯಾದವೇಂದ್ರ ಸಿಂಗ್ ವಿರುದ್ಧ ಸೋಲಿನ ಭೀತಿ ಎದುರಿಸುತ್ತಿದ್ದಾರೆ. ಯಾದವೇಂದ್ರ ಸಿಂಗ್ ಉಮಾಭಾರತಿಗಿಂತ 1000 ಮತಗಳ ಅಧಿಕ ಮತಗಳ ಮುನ್ನೆಡೆ ಕಾಯ್ದುಕೊಂಡು ಜಯದ ಕನಸು ಕಾಣುತ್ತಿದ್ದಾರೆ. ಜನಶಕ್ತಿ ಸಂಘ 216 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ:
ಐದು ರಾಜ್ಯಗಳ ಅಸೆಂಬ್ಲಿ ಚುನಾವಣೆ ಫಲಿತಾಂಶ
ಮಿಜೋರಾಂ ಕಾಂಗ್ರೆಸ್ ನ ಹವ್ಲಾ ಜಯಭೇರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X