ಹಿಂದೂ ಸಂಘಗಳಿಗೆ ಹಣ ಹರಿಯುತ್ತಿದೆ ,ಎಚ್ಚರ

ನ್ಯೂಯಾರ್ಕ್, ಡಿ.8 : ಅಮೆರಿಕದಲ್ಲಿರುವ ಭಾರತದ ಹಿಂದುಪರ ಸಂಘ ಸಂಸ್ಥೆಗಳಿಂದ ಅಪಾರ ಪ್ರಮಾಣದ ಹಣ ಹರಿದುಹೋಗುತ್ತದೆ. ಜತೆಗೆ ಧಾರ್ಮಿಕ ವಿಚಾರ ವಿನಿಮಯಗಳೂ ನಡೆಯುತ್ತವೆ. ಇದರ ಬಗ್ಗೆ ಅಮೆರಿಕ ಸರ್ಕಾರ ಸೂಕ್ತ ಎಚ್ಚರಿಕೆ ವಹಿಸಬೇಕು. ಹಾಗೂ ಈ ಬಗ್ಗೆ ತನಿಖೆಯನ್ನು ನಡೆಸಬೇಕು ಎಂದು ಅಮೆರಿಕದ ಸಂಸ್ಥೆಯೊಂದು ನೂತನ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಪತ್ರ ಬರೆದಿದೆ.

ಭಾರತದ ಹಿಂದುಪರ ಸಂಘಟನೆಗಳಿಗೆ ಇಲ್ಲಿಂದ ಅಪಾರ ಪ್ರಮಾಣದ ಹಣ ಹರಿದು ಹೋಗುತ್ತಿದೆ. ಇದರ ಎಚ್ಚರಿಕೆಯ ಜೆತೆಗ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು Coalition Against Genocide ಎಂಬ ಸಂಘಟನೆ ಬರಾಕ್ ಒಬಾಮಾ ಅವರಿಗೆ ಪತ್ರ ಬರೆದಿದೆ.

ಭಾರತದಲ್ಲಿರುವ ಆರ್ಎಸ್ಎಸ್, ವಿಎಚ್ ಪಿ ಸಂಘಟನೆಗಳಿಗೆ ಕೆಲ ಸರ್ಕಾರರೇತರ ಸಂಘ ಸಂಸ್ಥೆಗಳಿಂದ ಅಪಾರ ಹಣ ಹರಿದು ಹೋಗುತ್ತಿದೆ. ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ಸಂಘಟನೆ ಆಗ್ರಹಿಸಿದೆ.

ಈ ಸಂಘಟನೆ ಪ್ರಕಾರ, ಅಮೆರಿಕನ್ ವಿಎಚ್ ಪಿ, ಇಂಡಿಯಾ ಡೆವಲಪ್ ಮೆಂಟ್ ಅಂಡ್ ರಲೀಫ್ ಫಂಡ್ ಮತ್ತು ಈಕಾಲ್ ವಿದ್ಯಾಲಯ ಸೇರಿದಂತೆ ಅನೇಕ ಸಂಘಟನೆಗಳು ಭಾರತದಲ್ಲಿರುವ ಹಿಂದು ಸಂಘಟನೆಗಳಿಗೆ ಹಣವನ್ನು ಒದಗಿಸುತ್ತವೆ ಆರೋಪಿಸಿದೆ. ಈ ಬಗ್ಗೆ ಎಚ್ಚರವಿರಲಿ ಎಂದು ನೂತನ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ. ಆರ್ಎಸ್ ಎಸ್, ವಿಎಚ್ ಪಿ ಸಂಘಟನೆಗಳೊಂದಿಗೆ ಸಂಪರ್ಕವಿರಿಸಿಕೊಂಡಿದ್ದಾರೆ ಎಂದು ಅವರು ಪತ್ರದಲ್ಲಿ ಸಂಘಟನೆ ಆರೋಪಿಸಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+