ರಾಮು ಭಯೋತ್ಪಾದಕನಲ್ಲ: ದೇಶಮುಖ್

ಮುಂಬೈ, ಡಿ. 1 : ಚಿತ್ರ ನಿರ್ಮಾಪಕ ರಾಮ ಗೋಪಾಲ್ ವರ್ಮಾ ಭಯೋತ್ಪಾದಕನಲ್ಲ. ಅವರನ್ನು ನನ್ನ ಜತೆಗೆ ಕರೆದುಕೊಂಡು ಹೋಗುವುದರಲ್ಲಿ ತಪ್ಪೇನಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್ ರಾವ್ ದೇಶಮುಖ್ ಪ್ರಶ್ನಿಸಿದ್ದಾರೆ. ಇಂದು ಬೆಳಗ್ಗೆ ಸಿಎಂ ವಿಲಾಸ್ ರಾವ್ ದೇಶಮುಖ್, ದೇಶಮುಖ್ ಪುತ್ರ ರಿತೇಶ್ ಹಾಗೂ ಬಾಲಿವುಡ್ ನ ಖ್ಯಾತ ನಿರ್ದೇಶಕ, ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಉಗ್ರರ ದಾಳಿಗ ತತ್ತರಿಸಿರುವ ತಾಜ್ ಹೋಟೆಲ್ ವಿಕ್ಷಣೆಗಾಗಿ ಅವರೊಂದಿಗೆ ಕರೆದುಕೊಂಡು ಹೋಗಿರುವುದು ತೀವ್ರ ವಿವಾದಕ್ಕೆ ಕಾರಣವಾಗಿವೆ.

ಮಹಾರಾಷ್ಟ್ರದ ಪ್ರತಿಪಕ್ಷಗಳಾದ ಶಿವಸೇನೆ ಹಾಗೂ ಬಿಜೆಪಿ ಪಕ್ಷಗಳ ಮುಖಂಡರು ಮುಖ್ಯಮಂತ್ರಿಯವರ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದು, ದೇಶಮುಖ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಮುಖ್ಯಮಂತ್ರಿಯಂದಿಗೆ ತಾಜ್ ಭೇಟಿ ನೀಡಿದ್ದು ಭಾರಿ ಕಾರಣವಾಗಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯ ನೀಡಿರುವ ರಾಮ ಗೋಪಾಲ್ ವರ್ಮಾ ಮುಖ್ಯಮಂತ್ರಿ ವಿಲಾಸ್ ರಾವ್ ದೇಶಮುಖ್ ಆಹ್ವಾನದ ಮೇರೆಗೆ ತಾಜ್ ಭೇಟಿ ನೀಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ತಾಜ್ ಘಟನೆ ಕುರಿತು ಚಿತ್ರ ನಿರ್ಮಿಸುವ ಉದ್ದೇಶ ತಮಗಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.

ದೇಶಮುಖ್ ಹಾಗೂ ಅವರ ಪುತ್ರ ರಿತೇಶ್ ಮತ್ತು ರಾಮ್ ಗೋಪಾಲ್ ವರ್ಮಾ ತಾಜ್ ಭೇಟಿ ಒಂದು ರೀತಿಯಲ್ಲಿ ಪಿಕ್ ನಿಕ್ ಇದ್ದ ಹಾಗೆ ಇದು ಎಂದು ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಜವಾಬ್ದಾರಿಯುತ ವ್ಯಕ್ತಿಯಾಗಿ ಬೇಜವಾಬ್ದಾರಿಯಿಂದ ನಡೆದುಕೊಳ್ಳುವುದು ಸರಿಯಲ್ಲ ಎಂದು ತರಾಟೆ ತೆಗೆದುಕೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+