ನಿಗದಿಯಂತೆ ಟೆಸ್ಟ್ ಸರಣಿ ಸಾಧ್ಯತೆ:ಬಿಸಿಸಿಐ
ನವದೆಹಲಿ, ನ. 1 : ಮುಂಬೈನಲ್ಲಿ ನಡೆದ ಭಯೋತ್ಪಾದನೆ ಕೃತ್ಯದ ಹಿನ್ನೆಲೆಯಲ್ಲಿ ಆಟಗಾರರ ಭದ್ರತೆಯ ದೃಷ್ಟಿಯಿಂದ ಸ್ವದೇಶಕ್ಕೆ ಮರಳಿದ್ದ ಇಂಗ್ಲೆಂಡ್ ತಂಡ ನಿಗದಿಯಂತೆ ಟೆಸ್ಟ್ ಪಂದ್ಯಗಳನ್ನು ಆಡುವ ಸಾಧ್ಯತೆ ಹೆಚ್ಚಾಗಿವೆ. ಆದರೆ ಪಂದ್ಯ ನಡೆಯುವ ಸ್ಥಳಗಳಲ್ಲಿ ಬದಲಾವಣೆ ಮಾಡಲಾಗಿದೆ.
ಡಿ.11 ರಿಂದ 15ರ ವರೆಗೆ ಪ್ರಥಮ ಟೆಸ್ಟ್ ಮೊಹಾಲಿಯಲ್ಲಿ ಹಾಗೂ ಎರಡನೇ ಟೆಸ್ಟ್ ಚೆನ್ನೈನಲ್ಲಿ ನಡೆಯಲಿದೆ. ಈ ಮೊದಲು ಅಹಮದಾಬಾದ್ ನಲ್ಲಿ ಪ್ರಥಮ ಟೆಸ್ಟ್ ಮತ್ತು ಎರಡನೇ ಟೆಸ್ಟ್ ಮುಂಬೈನಲ್ಲಿ ನಡೆಯಬೇಕಿತ್ತು. ಡಿ 5 ರಿಂದ 7ರ ವರೆಗೆ ಬರೋಡಾದಲ್ಲಿ ನಡೆಯಬೇಕಿದ್ದ ಮೂರು ದಿನಗಳ ಪಂದ್ಯ ಕೂಡಾ ಮೊಹಾಲಿಯಲ್ಲಿ ನಡೆಯುವ ಸಾಧ್ಯತೆಗಳಿವೆ.
ಏಳು ಏಕದಿನ ಪಂದ್ಯಗಳನ್ನು ಭಾರತ-ಇಂಗ್ಲೆಂಡ್ ತಂಡಗಳು ಆಡಬೇಕಿತ್ತು. ಇದರಲ್ಲಿ ಈಗಾಗಲೇ ಐದು ಪಂದ್ಯಗಳನ್ನು ಆಡಲಾಗಿದೆ. ಆಡಿದ ಪಂದ್ಯಗಳಲ್ಲಿ ಭಾರತ ತಂಡ ಐದೂ ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಸರ್ವಾಧಿಕಾರತ್ವವನ್ನು ಪ್ರದರ್ಶಿಸಿದೆ. ಇನ್ನೆರಡು ಏಕದಿನ ಪಂದ್ಯಗಳನ್ನು ಆಡಬೇಕಿತ್ತು. ಆದರೆ ಕಳೆದ ಬುಧವಾರ (ನ.26) ಮುಂಬೈನಲ್ಲಿ ಭಯೋತ್ಪಾದನೆ ಹಿನ್ನೆಲೆಯಲ್ಲಿ ಇಂಗ್ಲೆಂಡ್ ತಂಡದ ಆಟಗಾರರಿಗೆ ಭದ್ರತೆಯ ಕೊರತೆ ಹಿನ್ನೆಲೆಯಲ್ಲಿ ಇಂಗ್ಲೆಂಡ್ ತಂಡ ಬೆಂಗಳೂರಿನಿಂದ ಸ್ವದೇಶಕ್ಕೆ ಮರಳಿತ್ತು. ಆದರೆ ಇಂಗ್ಲೆಂಡ್ ಭಾರತ ಮತ್ತೆ ಆಗಮಿಸಲಿದೆ ಎನ್ನುವುದಕ್ಕೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications