ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕ್ಸಲ್ ನಿಗ್ರಹ ಪಡೆ ಇನ್ನಷ್ಟು ಬಲ, ಆಚಾರ್ಯ

By Staff
|
Google Oneindia Kannada News

ಮಡಿಕೇರಿ. ನ. 27 : ರಾಜ್ಯದಲ್ಲಿ ನಕ್ಸಲ್ ಹಾವಳಿ ನಿಗ್ರಹಕ್ಕೆ ಸರ್ಕಾರ ಕ್ರಮ ಕೈಗೊಂಡಿದ್ದು ಪೊಲೀಸ್ ಇಲಾಖೆಯನ್ನು ಮತ್ತಷ್ಟು ಬಲಪಡಿಸಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ವಿಎಸ್ ಆಚಾರ್ಯ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಕೇಂದ್ರ ಸರ್ಕಾರದ ನಕ್ಸಲ್ ಪೀಡಿತ ರಾಜ್ಯಗಳ ಪಟ್ಟಿಯಲ್ಲಿ ರಾಜ್ಯದ ಹೆಸರು ಇಲ್ಲ. ಆದರೂ 2000ನೇ ಇಸವಿಯ ನಂತರ ಕೆಲವು ಜಿಲ್ಲೆಗಳಲ್ಲಿ ನಕ್ಸಲರ ಸುಳಿದಾಟ ಹೆಚ್ಚಿದೆ ಎಂದರು. ನಕ್ಸಲರು ತಮ್ಮ ಈ ಶಸ್ತ್ರ ಸಜ್ಜಿತ ಹೋರಾಟವನ್ನು ಬಿಟ್ಟು ಮಾತುಕತೆಗೆ ಮುಂದಾದರೆ ಅವರೊಂದಿಗೆ ಸಮಾಲೋಚಿಸಿ ಅವರಿಗೆ ಶಾಂತಿಯುತ ಬದುಕಿಗೆ, ಪುನರ್ ವಸತಿಗೆ ವ್ಯವಸ್ಥೆ ಕಲ್ಪಿಸಲು ಸರ್ಕಾರ ಸಿದ್ದವಿದೆ ಎಂದು ಮುಖ್ಯಮಂತ್ರಿಯವರು ಈಗಾಗಲೇ ತಿಳಿಸಿದ್ದಾರೆ. ಇದನ್ನು ಅರಿತು ನಕ್ಸಲರು ಮುಂದೆ ಬರಬೇಕು ಎಂದು ಗೃಹಸಚಿವರು ಹೇಳಿದರು.

ಮೃತ ಪೇದೆಗೆ 5 ಲಕ್ಷ ರು ಗಳ ಪರಿಹಾರ

ಚಿಕ್ಕಮಗಳೂರು ಜಿಲ್ಲೆ ಹೊರನಾಡು ಸಮೀಪದ ಮುತ್ತಿನ ಕಣಿವೆಯಲ್ಲಿ ನಡೆದ ನಕ್ಸಲರ ವಿರುದ್ದ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಕೊಡಗು ಜಿಲ್ಲೆಯ ಕುಂದಚೇರಿ ಗ್ರಾಮದ ರಾಜ್ಯ ಮೀಸಲು ಪೊಲೀಸ್ ಪಡೆಯ ಗುರುಪ್ರಸಾದ್ ಅವರ ಮನೆಗೆ ಇಂದು ಗೃಹ ಸಚಿವರಾದ ವಿ.ಎಸ್.ಆಚಾರ್ಯ ಅವರು ಭೇಟಿ ನೀಡಿ ಮೃತರ ತಂದೆ ತಾಯಿಗೆ ಸರ್ಕಾರದ ವತಿಯಿಂದ 5 ಲಕ್ಷ ರೂ.ಗಳ ಪರಿಹಾರ ಧನದ ಚೆಕ್ ವಿತರಿಸಿದರು.

ಗುರುಪ್ರಸಾದ್ ತಂದೆ ತಾಯಿ ಮತ್ತು ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದ ಗೃಹಸಚಿವರು ಗುರುಪ್ರಸಾದ್ ರಾಜ್ಯದ ಶಾಂತಿ, ಸುವ್ಯವಸ್ಥೆ ಪಾಲನೆಯಲ್ಲಿ ಪ್ರಾಣಾರ್ಪಣೆ ಮಾಡಿದ್ದು, ಸರ್ಕಾರ ಸಂತಾಪ ಹಾಗೂ ಸಹಾನುಭೂತಿ ವ್ಯಕ್ತಪಡಿಸುತ್ತದೆ ಎಂದರು. ಗುರುಪ್ರಸಾದ್ ಕುಟುಂಬಕ್ಕೆ ಅಗತ್ಯವಿರುವ ನೆರವನ್ನು ಜಿಲ್ಲಾಡಳಿತ ಒದಗಿಸಲಿದೆ. ಗುರುಪ್ರಸಾದ್ ಸೇವೆಯಲ್ಲಿದ್ದರೆ ಎಂದಿಗೆ ನಿವೃತ್ತರಾಗುತ್ತಿದ್ದರೂ ಆವರೆಗಿನ ಸಂಬಳವನ್ನು ಅವರ ತಂದೆ ತಾಯಿಯ ಜಂಟಿ ಖಾತೆಗೆ ಜಮೆ ಮಾಡಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಸರ್ಕಾರದ ವತಿಯಿಂದ ನೀಡಲಾದ ಪರಿಹಾರದ ಜೊತೆಗೆ ಪೊಲೀಸ್ ಇಲಾಖೆಯ ಜೀವ ವಿಮೆ ಯೋಜನೆಯಿಂದ ಮೂರು ಲಕ್ಷ ರೂ.ಗಳಿಗೂ ಅಧಿಕ ಮೊತ್ತ ಕೂಡ ದೊರೆಯಲಿದ್ದು, ಈ ಹಣ ಶೀಘ್ರವೇ ಸಂದಾಯವಾಗಲಿದೆ ಎಂದು ಅವರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X