ಮುಂಬೈಯಲ್ಲಿ ಉಗ್ರರ ಭೀಕರ ದಾಳಿ, 101 ಸಾವು

ಮುಂಬೈ, ನ. 27 : ದೇಶದ ವಾಣಿಜ್ಯ ನಗರಿ ಮುಂಬೈ ಮತ್ತೊಮ್ಮೆ ಉಗ್ರರ ದಾಳಿಗೆ ತತ್ತರಿಸಿದೆ. ಮಹಾನಗರದ ಆಯಕಟ್ಟಿನ 11 ಕಡೆ ಬುಧವಾರ ಸರಣಿ ಗುಂಡಿನ ದಾಳಿ ಮತ್ತು ಸ್ಫೋಟ ಘಟನೆಗಳಲ್ಲಿ 101ಕ್ಕೊ ಮಂದಿ ಮೃತಪಟ್ಟು 200 ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಉಗ್ರರನ್ನು ಸೆದೆಬಡಿಯುವ ಯತ್ನದಲ್ಲಿ ಮುಂಬೈ ತನ್ನ ಮೂವರು ಧೀರ ಪೊಲೀಸ್ ಅಧಿಕಾರಿಗಳನ್ನು ಕಳೆದುಕೊಂಡಿದೆ. ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಎಸಿಪಿ ಅಶೋಕ್ ಕಾಮ್ಟೆ ಹಾಗೂ ಚಕಮಕಿ ಚತುರ ವಿಜಯ್ ಸಾಲಸ್ಕರ್ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಗುಂಡಿನ ದಾಳಿ ನಡೆಸಿದ ಉಗ್ರರು ಬಳಿಕ ದಕ್ಷಿಣ ಮುಂಬೈನ ಮೂರು ಪ್ರಮುಖ ಹೋಟೆಲ್ ಗಳಲ್ಲಿ ಆಶ್ರಯ ಪಡೆದು ಅಲ್ಲಿ ತಂಗಿದ್ದವರನ್ನು ಒತ್ತೆಯಾಳಾಗಿಸಿಕೊಂಡರು.

ತಾರಾ ಹೋಟೆಲ್ ಗಳಾದ ಟ್ರೈಡೆಂಟ್ (ಒಬೆರಾಯ್), ತಾಜ್ ಹೋಟೆಲ್ ಗಳಲ್ಲಿ ಆಶ್ರಯ ಪಡೆದ ಉಗ್ರರನ್ನು ಸದೆ ಬಡಿಯಲು ರಾಷ್ಟ್ರೀಯ ಭದ್ರತಾ ಪಡೆಯ ವಿಶೇಷ ಯೋಧರು ತಡರಾತ್ರಿಯಿಂದ ಈ ವರೆಗೊ ಕಾರ್ಯಾಚರಣೆ ಮುಂದುವರಿಸಿದ್ದಾರೆ. ತಾಜ್ ಹೋಟೆಲ್ ಚಾವಣಿಯಲ್ಲಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, 15 ವಿದೇಶಿಯರು ಮತ್ತು ಕೆಲವು ಸಂಸದರು ಸೇರಿದಂತೆ 25ಕ್ಕೊ ಹೆಚ್ಚು ಮಂದಿ ಉಗ್ರರ ಒತ್ತೆಸೆರೆಯಲ್ಲಿದ್ದಾರೆ ಎನ್ನಲಾಗಿದೆ.

ಏತನ್ಮಧ್ಯ ಟ್ರೈಡೆಂಟ್ ಹೋಟೆಲ್ ನಲ್ಲಿ ಅಡಗಿದ್ದ ಇಬ್ಬರು ಉಗ್ರರನ್ನು ಸೆರೆಹಿಡಿಯುವಲ್ಲಿ ಯೋಧರು ಸಫಲರಾಗಿದ್ದಾರೆ. ಗಿರಗಾಂವ್ ಬಳಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ರಾತ್ರಿ 10.25ರ ಸುಮಾರಿಗೆ ಬಹುತೇಕ ಎಲ್ಲ ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂದು ಪೊಲೀಸರು ತಿಳಿಸಿದ್ದಾರೆ. ಸೇನಾ ಪಡೆ ನೌಕಾಪಡೆ ಹಾಗೂ ಕ್ಷಿಪ್ರ ಕಾರ್ಯಾಚರಣೆ ಪಡೆ ಸ್ಥಳಕ್ಕೆ ಧಾವಿಸಿ ನೆರವಿಗೆ ಸಜ್ಜಾಗಿವೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+