ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ಷೇರು ಮಾರುಕಟ್ಟೆಗೆ ಎರಡು ದಿನ ರಜೆ

By Staff
|
Google Oneindia Kannada News

ಮುಂಬೈ, ನ. 27 : ಬುಧವಾರ ರಾತ್ರಿ ನಗರದ ವಿವಿಧೆಡೆ ಉಗ್ರರು ನಡೆಸಿದ ಭೀಕರ ದಾಳಿಯ ಕರಿನೆರಳು ಮಾರುಕಟ್ಟೆ ಮೇಲೂ ಬಿರುಗಾಳಿ ಬೀಸುವ ಹಿನ್ನೆಲೆಯಲ್ಲಿ ಮುಂಬೈ ಷೇರು ಮಾರುಕಟ್ಟೆ ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆಯ ವಹಿವಾಟುಗಳಿಗೆ ಎರಡು ದಿನಗಳ ರಜೆ ಘೋಷಿಸಲಾಗಿದೆ.

ಭಯೋತ್ಪಾದನಾ ಕೃತ್ಯದ ಕರಾಳ ಛಾಯೆ ಷೇರು ಮಾರುಕಟ್ಟೆಗೆ ವ್ಯಾಪಿಸುವ ಮುನ್ನವೇ ಎರಡು ದಿನದ ರಜೆ ಘೋಷಣೆ ಮಾಡಿ ಸಮಯಪ್ರಜ್ಞೆ ಮೆರೆಯಲಾಗಿದೆ. ಷೇರು ಮಾರುಕಟ್ಟೆ ವಹಿವಾಟಿಗೆ ಇಂದಿನ ವಾತಾವರಣ ತುಂಬಾ ಅನಾನುಕೂಲವಾಗಿದೆ. ರಾಜ್ಯ ಸರ್ಕಾರ ಹಾಗೂ ವಾಣಿಜ್ಯ ಇಲಾಖೆಯ ಸೂಚನೆಯ ಮೇರೆಗೆ ಈ ಕ್ರಮಕೈಗೊಳ್ಳಲಾಗಿದೆ ಎಂದು ಷೇರು ಮಾರುಕಟ್ಟೆಯ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಗುರುವಾರ ಮತ್ತು ಶುಕ್ರವಾರ ರಜೆ ನೀಡಿದರೆ, ಶನಿವಾರ ಹಾಗೂ ಭಾನುವಾರ ರಜಾ ದಿನಗಳು, ಷೇರು ಮಾರುಕಟ್ಟೆಯ ವಹಿವಾಟು ಸೋಮವಾರದಿಂದ ಆರಂಭವಾಗಲಿದೆ. ಸೋಮವಾರದ ಹೊತ್ತಿಗೆ ದಾಳಿಯ ಭೀತಿ ಸ್ವಲ್ಪ ತಿಳಿಯಾಗಿರುತ್ತದೆ. ವಹಿವಾಟಿಗೆ ಯಾವುದೇ ಪರಿಣಾಮ ಬೀರುವ ಸಾಧ್ಯತೆಗಳು ಕಡಿಮೆ ಇರುವುದರಿಂದ ಸೋಮವಾರ ಎಂದಿನಂತೆ ಷೇರು ಮಾರುಕಟ್ಟೆ ಎಂದಿನಂತೆ ತನ್ನ ಕಾರ್ಯ ನಿರ್ವಹಿಸಲಿದೆ ಎನ್ನುವುದು ಷೇರುಮಾರುಕಟ್ಟೆಯ ಅಧಿಕಾರಗಳ ಲೆಕ್ಕಾಚಾರವಾಗಿದೆ.
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X