ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಘಟ್ಟದ ಗಣಿಗಾರಿಕೆ ನಿಷೇಧ: ಸಿಎಂ

By Staff
|
Google Oneindia Kannada News

ಬೆಂಗಳೂರು, ನ. 27 : ಪಶ್ಚಿಮ ಘಟ್ಟದಲ್ಲಿ ಬೃಹತ್ ಪ್ರಮಾಣದ ಗಣಿಗಾರಿಕೆ ನಿಷೇಧ ಮಾಡಲು ಸರ್ಕಾರ ಬದ್ಧವಾಗಿದೆ, ಇದಕ್ಕಾಗಿ ಸಮಗ್ರ ನೀತಿಯನ್ನು ಸರ್ಕಾರ ಮೂರು ತಿಂಗಳಲ್ಲಿ ಪ್ರಕಟಿಸಲಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಪಶ್ಚಿಮ ಘಟ್ಟ ಕಾರ್ಯಪಡೆ ಹಾಗೂ ಅರಣ್ಯ ಇಲಾಖಾ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಭಾಗವಹಿಸಿದ ನಂತರ ಪತ್ರಕರ್ತರನ್ನುದ್ದೇಶಿಸಿ ಮಾತಾನಾಡುತ್ತಿದ್ದ ಅವರು, ಪ್ರಸಕ್ತ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯಾವುದೇ ಪರವಾನಿಗೆ ನವೀಕರಣ ಮಾಡಿಲ್ಲ ಎಂದರು. ದೇವರ ಕಾಡು ಸಂರಕ್ಷಣೆ ಬಗ್ಗೆ ಸರ್ಕಾರ ಮುಂದಾಗಿದ್ದು ಈಗಾಗಲೇ 12 ದೇವರ ಕಾಡುಗಳ ಸಂರಕ್ಷಣಾ ಕಾರ್ಯಕ್ರಮ ಆರಂಭವಾಗಿದೆ. ಇನ್ನೂ ಸುಮಾರು 250 ದೇವರ ಕಾಡುಗಳನ್ನು ಗುರುತಿಸಿ ಸಂರಕ್ಷಿಸಲು ಅಗತ್ಯ ಪ್ರಯತ್ನ ನಡೆಯಲಿದೆ ಎಂದು ತಿಳಿಸಿದರು.

ಪಶ್ಚಿಮ ಘಟ್ಟದ ಅರಣ್ಯ ಸಂರಕ್ಷಣೆ ಹಾಗೂ ಸಂವರ್ಧನೆ ಕಾರ್ಯದಲ್ಲಿ ಸ್ಥಾನೀಕ ರೈತಾಪಿ ಜನರನ್ನು ತೊಡಗಿಸಲು ಹಾಗೂ ಈ ಮೂಲಕ ಸುಮಾರು 1 ಲಕ್ಷ ಜನರಿಗೆ ಉದ್ಯೋಗ ನೀಡಲು ಕಾರ್ಯಯೋಜನೆಯನ್ನು ಮೂರು ತಿಂಗಳಲ್ಲಿ ಸಿದ್ಧಪಡಿಸಲಾಗುತ್ತದೆ ಎಂದರು. ವೃಕ್ಷಾರೋಪಣ ಅಭಿಯಾನದಲ್ಲಿ ಎಲ್ಲಾ ಶಾಲೆ, ಅರಣ್ಯ ಸಮಿತಿ, ಸಂಘ ಸಂಸ್ಥೆ, ಸ್ವ-ಸಹಾಯ ಸಂಘ, ಸ್ಥಾನಿಕ ನಗರಸಭೆ ಪಂಚಾಯತ್, ಧಾರ್ಮಿಕ ಸಂಸ್ಥೆಗಳು ಭಾಗವಹಿಸಿ ಹಣ್ಣು - ಹಂಪಲು ಹಾಗೂ ಸ್ಥಾನೀಯ ಜಾತಿಯ 1 ಕೋಟಿ ಸಸಿಗಳನ್ನು ನೆಡಲಾಗುವುದು ಎಂದು ಅವರು ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X