ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಪ್ರಧಾನಿ ವಿ.ಪಿ.ಸಿಂಗ್ ನಿಧನ

By Staff
|
Google Oneindia Kannada News

ನವದೆಹಲಿ,ನ.27:ಮಾಜಿ ಪ್ರಧಾನಿ ವಿಶ್ವನಾಥ್ ಪ್ರತಾಪ್ ಸಿಂಗ್ ನವದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಗುರುವಾರ ಮಧ್ಯಾಹ್ನ ನಿಧನ ಹೊಂದಿದರು. ಅವರಿಗೆ77 ವರ್ಷ ವಯಸ್ಸಾಗಿತ್ತು. ಸುಮಾರು 17 ವರ್ಷಗಳಿಂದ ಅವರು ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಎರಡು ವಾರಗಳ ಹಿಂದಷ್ಟೇ ಅವರನ್ನು ಆಸ್ಪತ್ರೆ ದಾಖಲಿಸಿದ್ದರು.

ವಿಪಿ ಸಿಂಗ್ ಭಾರತದ 10ನೇ ಪ್ರಧಾನಿಯಾಗಿ ಆಯ್ಕೆಯಾಗಿ ಕಾರ್ಯ ನಿರ್ವಹಿಸಿದ್ದರು. ಅವರ ಆಡಳಿತಾವಧಿಯಲ್ಲಿ ಮೀಸಲಾತಿ ಕುರಿತು ಮಂಡಲ್ ಆಯೋಗದ ಸಿಫಾರಸ್ಸನ್ನು ಜಾರಿಗೆ ತರಲಾಗಿತ್ತು. ಈ ಬಗ್ಗೆ ದೇಶದಲ್ಲಿ ತೀವ್ರ ವಿವಾದಗಳು ಭುಗಿಲೆದ್ದವು.ಅನಂತರ ಹಲವಾರು ಗುಂಪು ಘರ್ಷಣೆಗಳಿಗೂ ಇದು ಮೂಲವಾಯಿತು. ಎಷ್ಟೋ ಮಂದಿ ಯುವಕರು ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದರು.

1989ಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ, ಪ್ರಥಮ ಕಾಂಗ್ರೆಸ್ಸೇತರ ಸರಕಾರವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತಂದ ಘನತೆ ವಿಪಿ ಸಿಂಗ್ ಅವರಿಗೆ ಸಲ್ಲುತ್ತದೆ. ಸಿಂಗ್ ಅವರು ಪತ್ನಿ ಸೀತಾ ಕುಮಾರಿ, ಇಬ್ಬರು ಮಕ್ಕಳಾದ ಅಜಯ್ ಸಿಂಗ್, ಅಭಯ್ ಸಿಂಗ್ ಮತ್ತು ಅಪಾರ ಮಂದಿ ಅಭಿಮಾನಿಗಳು ಬಂಧು ಬಳಗವನ್ನು ಅಗಲಿದ್ದಾರೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X