ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನಿಂದ ನಿಶಾ ಬರುತ್ತಿದ್ದಾಳೆ ಎಚ್ಚರ!

By Staff
|
Google Oneindia Kannada News

ಚೆನ್ನೈ, ನ.27: ತಮಿಳುನಾಡಿನಿಂದ 'ನಿಶಾ' ಗಂಟೆಗೆ 75 ಕಿ.ಮೀ ವೇಗದಲ್ಲಿ ಉತ್ತರ ದಿಕ್ಕಿನೆಡೆಗೆ ಓಡಿ ಬರುತ್ತಿದ್ದಾಳೆ! ಈಗಾಗಲೇ ಅವಳು ಮುಂಜಾನೆ 5.30ರಿಂದ 6.30 ಗಂಟೆ ಸುಮಾರಿನಲ್ಲಿ ತಮಿಳುನಾಡು ಸಮುದ್ರ ತೀರವನ್ನು ದಾಟಿಯಾಗಿದೆ. ಆಕೆಯ ಸ್ವಲ್ಪ ಮಟ್ಟಿಗೆ ಕರ್ನಾಟಕದ ಮೇಲೂ ಪ್ರಭಾವ ಬೀರಲಿದ್ದಾಳೆ. ನಂತರ ಆಕೆ ವಾಯುವ್ಯ ದಿಕ್ಕಿನೆಡೆಗೆ ಸಂಚರಿಸುತ್ತಾ ಹಂತ ಹಂತವಾಗಿ ಮರೆಯಾಗಲಿದ್ದಾಳೆ. ಬೆಚ್ಚಗೆ ರಗ್ಗು ಹೊದ್ದು ರಕ್ಷಣೆ ಪಡೆಯುವುದಷ್ಟೆ ಈಗ ಉಳಿದಿರುವ ದಾರಿ!

ಮುಂಬೈ ಸ್ಫೋಟ ಪ್ರಕರಣದಿಂದ ಈಗಾಗಲೇ ದೇಶ ತಲ್ಲಣಿಸುತ್ತಿದ್ದರೆ ಇದ್ಯಾವುದು 'ನಿಶಾ' ಎಂಬ ಆತಂಕ ಬೇಡ. 'ನಿಶಾ' ಎಂದರೆ ಅದೊಂದು ಚಂಡಮಾರುತದ ಹೆಸರು ಅಷ್ಟೆ! ಮುಂದಿನ 24 ಗಂಟೆಗಳಲ್ಲಿ ತಮಿಳುನಾಡು ಮತ್ತ್ತು ಪಾಂಡಿಚೆರಿ ರಾಜ್ಯಗಳಲ್ಲಿ 'ನಿಶಾ' ಕುಂಭದ್ರೋಣ ಮಳೆ ಸುರಿಸಲಿದ್ದಾಳೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಕಳೆದ 24 ಗಂಟೆಗಳಲ್ಲಿ ಚೆನ್ನೈ ನಗರದಲ್ಲಿ 14 ಸೆಂಮೀ ಮಳೆ ದಾಖಲಾಗಿದೆ. ಚೆನ್ನೈನ ತಗ್ಗು ಪ್ರದೇಶದಲ್ಲಿರುವ ಜನರನ್ನು ನಗರ ಪಾಲಿಕೆ ಬೇರೆಡೆಗೆ ಸ್ಥಳಾಂತರ ಮಾಡಿದೆ. ಇಡೀ ತಮಿಳುನಾಡನ್ನು ನಿಶಾ ತೊಯ್ದು ತೊಪ್ಪೆಯಾಗಿಸಿದೆ. ಚಂಡಮಾರುತದ ಪ್ರಭಾವದಿಂದ ಬೆಂಗಳೂರು ಸಹ ಗಡಗಡಎಂದು ನಡುಗುವಂತಾಗಿದೆ.
(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X