ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಬಾಮ ಸಂಪುಟಕ್ಕೆ ಮತ್ತಷ್ಟು ಭಾರತೀಯರು

By Staff
|
Google Oneindia Kannada News

ವಾಷಿಂಗ್ ಟನ್, ನ. 26 : ವಿವಿಧ ರಂಗಗಳಲ್ಲಿ ಪ್ರತಿಭೆ ಮೆರೆದಿರುವ ಮತ್ತಷ್ಟು ಭಾರತೀಯ ಮೂಲದವರನ್ನು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ತನ್ನ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಸೇರ್ಪಡೆಗೊಂಡ ಎಲ್ಲರೂ ಒಬಾಮಾಗೆ ಚಿರಪರಿಚಿತರು ಮತ್ತು ದೀರ್ಘಕಾಲದಿಂದ ದುಡಿದ ಅನುಭವ ಹೊಂದಿದವರು.

ಟೆಕ್ಸಾಸ್ ನ ಪರಾಗ್ ಮೆಹ್ತಾ ಅವರನ್ನು ಅಂತರ ಸರಕಾರಿ ಸಂಬಂಧಗಳ ಹಾಗು ಅಲ್ಪಸಂಖ್ಯಾತ ಸಮೂಹಗಳ ಸಾರ್ವಜನಿಕ ಸಂಪರ್ಕ ಸಮಿತಿಯ ಉಪ ನಿರ್ದೇಶಕರಾಗಿ ನೇಮಿಸಿದ್ದಾರೆ. ನಿಕ್ ರಾತೋಡ ಅವರನ್ನು ಅಂತರ ಸರಕಾರ ವ್ಯವಹಾರಗಳ ಕಾರ್ಯಾಲಯದ ನಿರ್ದೇಶಕರಾಗಿ, ಒಬಾಮ ಸಹಪಾಠಿ ಆರತಿ ರಾಯ್ ಅವರನ್ನು ವಿಜ್ಞಾನ, ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಸಮಿತಿಯ ಸದಸ್ಯೆಯಾಗಿ, ಅಂಜನ್ ಮುಖರ್ಜಿ ಅವರನ್ನು ಅರ್ಥಶಾಸ್ತ್ರ ಮತ್ತು ಅಂತರಾಷ್ಟ್ರೀಯ ವಾಣಿಜ್ಯ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.

ರಚನಾ ಬೊವ್ಮಿಕ್, ಶುಭಶ್ರೀ ರಾಮನಾಥನ್, ನಟಾಶ್ ಬಿಲಿಮೊರಿಯಾ, ಪುನಿತ್ ತಲ್ವಾರ್ ಅವರು ಕ್ರಮವಾಗಿ ವಿದೇಶ, ರಾಷ್ಟ್ರೀಯ ಭದ್ರತೆ, ರಕ್ಷಣೆ, ಗುಪ್ತಚರ ಮತ್ತು ಶಸ್ತ್ರಾಸ್ತ್ರ ನಿಯಂತ್ರಣ ಸಮಿತಿಗಳ ಸದಸ್ಯರನ್ನಾಗಿ ನೇಮಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X