ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈದ್ಯಕೀಯ, ತಾಂತ್ರಿಕ ಸಿಇಟಿ ರದ್ದಿಗೆ ಚಿಂತನೆ?

By Staff
|
Google Oneindia Kannada News

ಮೈಸೂರು, ನ. 26: ಮೈಸೂರು ಕೃಷ್ಣರಾಜೇಂದ್ರ ಆಸ್ಪತ್ರೆಗೆ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರೇಗೌಡ ಅವರು ಮಂಗಳವಾರ ಬೆಳಿಗ್ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಚಿವರು ಆಸ್ಪತ್ರೆಯ ವಿವಿಧ ವಿಭಾಗಗಳು ಹಾಗೂ ವಾರ್ಡ್‌ಗಳಿಗೆ ಭೇಟಿ ನೀಡಿ ವಿವರ ತಪಾಸಣೆ ನಡೆಸಿದರು.

ಮೈಸೂರಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಆಶ್ರಯದಲ್ಲಿ ಏರ್ಪಡಿಸಿದ್ದ ಲೈಂಗಿಕ ಕಾರ್ಯಕರ್ತರು ಹಾಗೂ ಸಹವರ್ತಿ ಶಿಕ್ಷಕರ ಮೂರು ದಿನಗಳ ರಾಜ್ಯಮಟ್ಟದ ಸಮಾವೇಶದಲ್ಲಿ ಭಾಗವಹಿಸಿದ ಸಮಯದಲ್ಲಿ ಈ ವಿಷಯ ಪ್ರಸ್ತಾಪಿಸಿದರು.

ಎಲ್ಲ ನಾಗರೀಕರಿಗೆ ಬದುಕುವ ಹಕ್ಕು ಇದೆ. ಅವರ ನೆಮ್ಮದಿ ಜೀವನಕ್ಕೆ ಸಮಾಜ ಹಾಗೂ ಸರ್ಕಾರಗಳೆರಡೂ ಜವಾಬ್ದಾರಿ ವಹಿಸುವ ಅಗತ್ಯವಿದೆ. ಏಡ್ಸ್ ಪೀಡಿತರ ಬದುಕು ಹಸನಾಗಬೇಕು. ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕಾರ್ಯ ಸಮಾಜದಿಂದ ಆಗಬೇಕಿದೆ ಎಂದು ಸಚಿವರು ತಿಳಿಸಿದರು.

ಲೈಂಗಿಕ ಕಾರ್ಯಕರ್ತ ಹಾಗೂ ಸಹವರ್ತಿ ಶಿಕ್ಷಕರ ಸಮಾವೇಶ ಉದ್ಘಾಟನೆ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು ಆಸ್ಪತ್ರೆ ಸೌಲಭ್ಯಗಳ ಪರಿಶೀಲಿಸುವ ದೃಷ್ಠಿಯಿಂದಲೇ ದಿಢೀರ್ ಭೇಟಿ ನೀಡಲಾಯಿತು. ಎಕ್ಸ್‌ರೇ ಮತ್ತು ಇಎನ್‌ಟಿ ವಿಭಾಗದಲ್ಲಿ ಸರತಿಯಲ್ಲಿ ಕಾಲ ನಿಗದಿಪಡಿಸಿ ಜನ ಬರುವ ವ್ಯವಸ್ಥೆ ಮಾಡಲು ಸೂಚಿಸಿದ್ದೇನೆ. ಸ್ವಚ್ಚತೆ ಬಗ್ಗೆ ಹೊಸದಾಗಿ ಟೆಂಡರ್ ಕರೆಯಲಾಗಿದೆ. ಅದರಲ್ಲಿ ಸ್ವಚ್ಚತೆ ಬಗ್ಗೆ ಸಮರ್ಪಕ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ ಎಂದು ಸಚಿವ ರಾಮಚಂದ್ರೇಗೌಡ ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು ಜೀವಣ್ಣರಾಯನಕಟ್ಟೆ ಮೈದಾನವನ್ನು ತಾತ್ಕಾಲಿಕ ಬಸ್‌ನಿಲ್ದಾಣಕ್ಕೆ ನೀಡಬೇಕೆನ್ನುವ ಬೇಡಿಕೆ ಬಗ್ಗೆ ಪರಿಶೀಲಿಸಲಾಗುತ್ತಿದೆ. ಒಂದೊಮ್ಮೆ ಅವಕಾಶ ನೀಡಿದರೆ ಮೆಡಿಕಲ್ ಕೌನ್ಸಿಲ್ ಅಸೋಸಿಯೇಷನ್ ಮಾನ್ಯತೆ ರದ್ದುಪಡಿಸಬಹುದೆಂಬ ಅನುಮಾನವಿದೆ. ಈ ಬಗ್ಗೆ ಕಡತ ತರಿಸಿಕೊಂಡು ಕಾರ್ಯದರ್ಶಿಗಳೊಡನೆ ವಿವರವಾಗಿ ಪರಿಶೀಲಿಸಲಾಗುವುದೆಂದು ಹೇಳಿದರು.

ಸಿ.ಇ.ಟಿ. ರದ್ದು? ಪರಿಶೀಲನೆ
ರಾಜ್ಯದಲ್ಲಿ ವೈದ್ಯಕೀಯ ಹಾಗೂ ತಾಂತ್ರಿಕ ಶಿಕ್ಷಣ ಪ್ರವೇಶಕ್ಕೆ ಈಗ ಇರುವ ಸಿ.ಇ.ಟಿ. ಪರೀಕ್ಷಾ ವ್ಯವಸ್ಥೆ ತದ್ದುಪಡಿಸುವ ಬಗ್ಗೆ ತೀವ್ರ ಪರಿಶೀಲನೆ ನಡೆಸಲಾಗುತ್ತಿದೆ. ಈಗಾಗಲೇ ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಬಗ್ಗೆ ತಮಗಿರುವ ತೊಂದರೆಗಳನ್ನು ತಿಳಿಸಿದ್ದಾರೆ. ಅಲ್ಲದೆ ಸರ್ಕಾರವೇ ಮಾಡುತ್ತಿರುವ ಪಿ.ಯು.ಸಿ. ತರಗತಿಗಳ ಬಗ್ಗೆ ನಂಬಿಕೆ ಇಲ್ಲದ ಪರಿಸ್ಥಿತಿಯೇ ಎಂಬ ಪ್ರಶ್ನೆ ಅಡಕವಾಗಿದೆ ಎಂದು ಸಚಿವ ರಾಮಚದ್ರಗೌಡ ಸುದ್ದಿಗಾರರಿಗೆ ತಿಳಿಸಿದರು.
(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X