ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ಕ್ಷೇತ್ರದಲ್ಲೊಂದು ವಿನಿವಿಂಕ್ ಕಂಪನಿ

By Staff
|
Google Oneindia Kannada News

ಚೆನ್ನೈ, ನ. 26 : ವಿನಿವಿಂಕ್ ಸೇರಿದಂತೆ ಅನೇಕ ಚಿಟ್ ಫಂಡ್ ಕಂಪನಿಗಳು ಜನಸಾಮಾನ್ಯರಿಗೆ ವಂಚಿಸಿ ಕೋಟ್ಯಂತರ ರುಪಾಯಿ ಇಡಿಗಂಟನ್ನ ಲಪಾಟಾಯಿಸಿ ಪರಾರಿಯಾಗಿರುವ ಅನೇಕ ಘಟನೆಗಳನ್ನು ಕೇಳಿದ್ದೇವೆ. ಚೆನ್ನೈಯಲ್ಲಿರುವ ವಿನಿವಿಂಕ್ ಮಾದರಿಯ ಸಾಫ್ಟವೇರ್ ಕಂಪನಿಯೊಂದು ಉದ್ಯೋಗಿಗಳಿಗೆ ಕೆಲಸದ ಆಮಿಷ ತೋರಿಸಿ ಕೋಟ್ಯಂತರ ರುಪಾಯಿಗಳಿಗೆ ಪಂಗನಾಮ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಕನಸಿನ ಮೊಟೆ ಹೊತ್ತು, ಕೈತುಂಬಾ ಸಂಬಳ ಸಿಗುವುದನ್ನು ಕನವರಿಸುತ್ತ ಇದೀಗ ತಾನೇ ಇಂಜಿನಿಯರಿಂಗ್ ಪದವಿ ಮುಗಿಸಿ ಹೊರಬಂದಿರುವ ವಿದ್ಯಾರ್ಥಿಗಳಿಗೆ ಚೆನ್ನೈ ಮೂಲದ ಸಾಫ್ಟವೇರ್ ಕಂಪನಿಯೊಂದು ಕೆಲಸ ನೀಡುತ್ತೇವೆ ಎಂದು ಮೊದಲು ನಂಬಿಸಿದೆ. ಎರಡು ವರ್ಷಗಳ ಒಪ್ಪಂದವನ್ನೂ ಮಾಡಿಕೊಂಡಿದೆ. 400 ಅಮಾಯಕ ವಿದ್ಯಾರ್ಥಿಗಳಿಂದ ಕೆಲಸ ನೀಡುವ ಮುಂಚಿತವಾಗಿಯೇ ಕನಿಷ್ಟ ಒಂದರಿಂದ ಎರಡು ಲಕ್ಷ ರುಪಾಯಿವರೆಗೊ ಠೇವಣಿ ಹಣವನ್ನು ವಸೂಲಿ ಮಾಡಿದೆ.

ಆಸೆಯ ಬಿಸಿಲು ಕುದುರೆಗೆ ಮರಳಾಗಿರುವ ವಿದ್ಯಾರ್ಥಿಗಳು ಒಡವೆ ಸೇರಿದಂತೆ ಮತ್ತಿತರ ಬೆಲೆ ಬಾಳುವ ವಸ್ತುಗಳನ್ನು ಅಡ ಇಟ್ಟು ಹಣ ಕೂಡಿಸಿ ಕಂಪನಿಯ ಮುಖ್ಯಸ್ಥರ ಕೈಗೆ ನೀಡಿದ್ದಾರೆ. ಪದವಿ ಮುಗಿಸಿಕೊಂಡು ವೃತ್ತಿ ಜೀವನಕ್ಕೆ ಕಾಲಿಡುತ್ತಿರುವ ನಿಮಗೆ ತಿರುವನಂತಪುರಂನಲ್ಲಿ ಆರು ತಿಂಗಳು ಕಾಲ ತರಬೇತಿ ನೀಡುತ್ತೇವೆ ಎಂದು ಭರವಸೆ ನೀಡಿದ ಕಂಪನಿಯೂ ತರಬೇತಿಯನ್ನು ಆರಂಭಿಸಿದೆ.

ಇಷ್ಟಾದ ಮೇಲೆ ಯಾರಿಗೆ ತಾನೇ ವಿಶ್ವಾಸ ಹುಟ್ಟುವುದಿಲ್ಲ. ಇಂದಲ್ಲ ನಾಳೆ ಕಂತೆ ಕಂತೆ ರೊಕ್ಕ ಎಣಿಸುವುದನ್ನು ಕನಸು ಕಾಣುತ್ತಿದ್ದ ವಿದ್ಯಾರ್ಥಿಗಳ ಕನಸು ಗಗನಕುಸುಮವಾಗಿ ಉಳಿಯಿತು. ಸುಮಾರು 400 ವಿದ್ಯಾರ್ಥಿಗಳಿಂದ ಹಣ ಪೀಕಿಸಿದ ಕಂಪನಿ ಹೇಳದೇ ಕೇಳದೇ ಠೇವಣಿಯನ್ನು ಎತ್ತಿಕೊಂಡು ಪರಾರಿಯಾಗಿದೆ. ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿಗಳಿಗೆ ಕಂಪನಿಯಿಂದ ಮೋಸ ಹೋಗಿರುವ ಸುದ್ದಿ ತಿಳಿದು ಕಂಗಾಲಾಗಿದ್ದಾರೆ. ತರಬೇತಿ ಅವಧಿಯಲ್ಲಿ 11 ಸಾವಿರ ರು.ಗಳನ್ನು ಸಂಬಳ ನೀಡುತ್ತೇವೆ. ತರಬೇತಿ ಪೂರ್ಣಗೊಂಡ ನಂತರ 20 ಸಾವಿರ ರು.ಗಳನ್ನು ಎಂದು ಕಂಪನಿ ಹೇಳಿತ್ತು. ಆದರೆ ಕಂಪನಿ ಮುಚ್ಚಿರುವುರಿಂದ ತೀವ್ರ ಅಘಾತ ಅನುಭವಿಸುವಂತಾಗಿದೆ ಎಂದು ಮೋಸ ಹೋದ ವಿದ್ಯಾರ್ಥಿಯೊಬ್ಬ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.

ಮೋಸ ಹೋಗಿರುವ ಸಾಫ್ಟವೇರ್ ಇಂಜಿನಿಯರ್ ಗಳಲ್ಲಿ ಹೆಚ್ಚಿನವರು ತಮಿಳುನಾಡಿನ ಪಟ್ಟಣ ಪ್ರದೇಶದಿಂದ ಬಂದವರಾಗಿದ್ದಾರೆ. ಕೇರಳ ಹಾಗೂ ಒರಿಸ್ಸಾ ವಿದ್ಯಾರ್ಥಿಗಳು ಇದರಲ್ಲಿ ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ವಂಚಿಸಿ ಹಣ ಲಪಾಟಾಯಿಸಿರುವ ಕಂಪನಿಯ ಸಂಬಂಧಿಸಿದ ಅರುಣ್ ಕುಮಾರ್ ರಾಮಯ್ಯ, ಜಾಕೀರ್ ಹುಸೇನ್ ಹಾಗೂ ಶಶಿ ಎಂಬ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X