ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಹಿಂದೂರಾಷ್ಟ್ರವಲ್ಲ, ದೇವೇಗೌಡ

By Staff
|
Google Oneindia Kannada News

ಹುಬ್ಬಳ್ಳಿ, ನ. 26 : ಭಾರತ ಎಂದಿಗೂ ಹಿಂದೂ ರಾಷ್ಟ್ರವಾಗಲು ಸಾಧ್ಯವಿಲ್ಲ. ಸರ್ವ ಧರ್ಮಗಳ ಸಮನ್ವಯತೆಯ ಬೀಡಾಗಿರುವ ಈ ನೆಲೆಯದಲ್ಲಿ ಭಾರತೀಯ ಜನತಾ ಪಕ್ಷ ಜಾತಿಯ ವಿಷ ಬೀಜ ಬಿತ್ತಿ ಹಿಂದೂ ರಾಷ್ಟ್ರ ಮಾಡಲು ಪಣತೊಟ್ಟಿದೆ. ಆದರೆ ಈ ಪ್ರಯತ್ನದಲ್ಲಿ ಬಿಜೆಪಿ ನಾಯಕರಿಗೆ ಯಶಸ್ವಿ ಅಸಾಧ್ಯ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಗುಡುಗಿದರು.

ಮುಂಬರುವ ಉಪಚುನಾವಣೆಯ ದೃಷ್ಟಿಯಲ್ಲಿಟ್ಟುಕೊಂಡು ಪಕ್ಷದ ಬಲವರ್ಧನೆಗಾಗಿ ನಗರದಲ್ಲಿ ಆಯೋಜಿಸಲಾಗಿರುವ ಸಂಘಟನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಭಾರತೀಯ ಜನತಾ ಪಕ್ಷ ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ವಿಫಲ ಯತ್ನ ನಡೆಸಿದೆ. ಜಾತ್ಯಾತೀತ ರಾಷ್ಟ್ರವಾಗಿರುವ ಭಾರತವನ್ನು ಬಿಜೆಪಿ ಪಕ್ಷ ಎಂದಿಗೂ ಹಿಂದೂರಾಷ್ಟ್ರ ಮಾಡಲು ಆಗುವುದಿಲ್ಲ ಎಂದು ಸವಾಲಿನ ರೀತಿಯಲ್ಲಿ ಮಾತನಾಡಿದರು.

ಹಿಂದೂ ರಾಷ್ಟ್ರ ಮಾಡಬೇಕೆನ್ನುವ ಉದ್ದೇಶದಿಂದ ಭಾರತದಲ್ಲಿರುವ ಅಲ್ಪಸಂಖ್ಯಾತರ ಮೇಲೆ ವಿನಾಕಾರಣ ದೌರ್ಜನ್ಯ ಎಸಗುತ್ತಿರುವ ಬಿಜೆಪಿಗೆ ಚುನಾವಣೆಯ ಮೂಲಕ ಬುದ್ಧ ಕಲಿಸಿಬೇಕಿದೆ ಎಂದು ಗೌಡರು ವಾಗ್ಧಾಳಿ ನಡೆಸಿದರು. ಭಾರತವನ್ನು ಈ ವಿಧಾನ ಬಳಿಸಿ ಹಿಂದೂರಾಷ್ಟ್ರ ಮಾಡುತ್ತೇವೆ ಎಂದು ಯಾರಾದರೂ ನನಗೆ ಮನವರಿಕೆ ಮಾಡಿದರೆ ಅವರಿಗೆ ನಾನು ತಲೆಬಾಗುವೆ ಎಂದು ಹೇಳಿದರು.

ಭಾರತ ಹಿಂದು, ಮುಸ್ಲಿಂ, ಕ್ರೈಸ್ತ, ಜೈನ ಹೀಗೆ ಅನೇಕ ಜನಾಂಗಗಳ ತಾಣವಾಗಿದೆ. ಇದನ್ನು ಬದಲಾಯಿಸುವ ಶಕ್ತಿ ಯಾರಿಗೂ ಇಲ್ಲ ಎಂದು ಗೌಡರು ಪ್ರತಿಪಾದಿಸಿದರು. ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರಿಂಕೋರ್ಟ್ ನ ಹಾಲಿ ನ್ಯಾಯಮೂರ್ತಿಯೊಬ್ಬರಿಂದ ತನಿಖೆ ನಡೆಸಿ ಎಂದು ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಎರಡು ಬಾರಿ ಪತ್ರ ಬರೆದಿದ್ದೆ, ಆದರೆ ಅಂದಿನ ಸರ್ಕಾರದಿಂದ ಯಾವುದೇ ಬಂದಿಲ್ಲ ಎಂದು ಬಿಜೆಪಿ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ಮುಂಬರುವ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ಸಮಾನ ದೂರದಲ್ಲಿಟ್ಟು ಏಕಾಂಗಿಯಾಗಿ ಹೋರಾಟ ನಡೆಸಲಿದೆ. ಕಾಂಗ್ರೆಸ್ ಜತೆಗಿನ ಮೈತ್ರಿ ಮುಗಿದ ಅಧ್ಯಾಯ ಎಂದು ಹೇಳುವ ಮೂಲಕ ಜೆಡಿಎಸ್- ಕಾಂಗ್ರೆಸ್ ಮೈತ್ರಿಗೆ ದೇವೇಗೌಡ ತಿಲಾಂಜಲಿ ನೀಡಿದರು. ಬಿಜೆಪಿ ನಡೆಸಿದ ಆಪರೇಷನ್ ಕಮಲದ ಮೂಲಕ ಗಾಂಧಿ ಕಂಡ ಕನಸು ನುಚ್ಚು ನೂರಾಗಿದೆ. ಬಿಜೆಪಿ ಸರ್ಕಾರದ ದುರಾಡಳಿತದಿಂದ ಜನತೆ ಬೇಸತ್ತು ಹೋಗಿದ್ದಾರೆ ಎಂದು ದೇವೇಗೌಡ ಕಿಡಿಕಾರಿದರು.
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X