ಶ್ರೀರಾಮುಲು ಸಿಎಂ ಆಗ್ತಾರೆ, ಜನಾರ್ದನರೆಡ್ಡಿ
ಬಳ್ಳಾರಿ, ನ. 24 : ಆರೋಗ್ಯ ಸಚಿವ ಶ್ರೀರಾಮುಲು ಈ ರಾಜ್ಯ ಮೆಚ್ಚುವಂತಹ ಮುಖ್ಯಮಂತ್ರಿಯಾಗುತ್ತಾರೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪ್ರವಾಸೋದ್ಯಮ ಸಚಿವ ಜನಾರ್ದನರೆಡ್ಡಿ ಭವಿಷ್ಯ ನುಡಿದರು.
ಜಿಲ್ಲಾ ವಾಲ್ಮೀಕಿ ನಾಯಕರ ವಿದ್ಯಾಭಿವೃದ್ಧಿ ಸಂಘ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ವಾಲ್ಮೀಕಿ ಜಯಂತಿ ಉತ್ಸವ ಉದ್ಘಾಟಿಸಿ ಮಾತನಾಡಿದರು. ಶ್ರೀರಾಮುಲು ಜಾತಿ ಮೀರಿ ಬೆಳೆದಿದ್ದಾರೆ. ದಲಿದ ಸಮುದಾಯಕ್ಕೆ ಖರ್ಗೆ, ಕುರುಬ ಜನಾಂಗಕ್ಕೆ ಸಿದ್ದರಾಮಯ್ಯ ಇದ್ದಂತೆ ವಾಲ್ಮೀಕಿ ಜನಾಂಗಕ್ಕೆ ಶ್ರೀರಾಮುಲು ಇದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲಿ ಪ್ರವಾಸ ಮಾಡಿದ ಶ್ರೀರಾಮುಲು ಅನೇಕರ ಗೆಲುವಿಗೆ ಕಾರಣರಾಗಿದ್ದಾರೆ ಎಂದರು.
ಜಿಲ್ಲೆಯ ಕೆಲ ನಾಯಕರು ವಾಲ್ಮೀಕಿ ಜಾತಿಯನ್ನು ದುರ್ಬಳಿಕೆ ಮಾಡಿಕೊಂಡಿದ್ದಾರೆ. ಆದರೆ, ಇಂದು ನಮ್ಮ ಕುಟುಂಬರಾಜಕೀಯಕ್ಕೆ ಬಂದಿರುವುದೇ ಶ್ರೀರಾಮುಲನನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲಿಕ್ಕೆ ಎಂದ ಜನಾರ್ದನರೆಡ್ಡಿ, ಮುಗ್ಧ ಮನಸ್ಸಿನ ಇಂತಹ ಯುವ ನಾಯಕ ಸಿಎಂ ಪದವಿ ಏರುವ ದಿನ ದೂರವಿಲ್ಲ ಎಂದು ಅವರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
