ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಯಾವತಿ ಬೆಂಗಾವಲಿಗೆ 350 ಜನ

By Staff
|
Google Oneindia Kannada News

ಲಕ್ನೋ, ನ. 24 : ಉತ್ತರಪ್ರದೇಶ ದ ಮುಖ್ಯಮಂತ್ರಿ ಕುಮಾರಿ ಮಾಯಾವತಿಗೆ ಭದ್ರತಾ ವ್ಯವಸ್ಥೆ ಎಷ್ಟು ಗೊತ್ತೇ ? ಇವರು ತನ್ನ ಕಛೇರಿ ಅಥವಾ ಮನೆ ಇಂದ ಸಭೆ, ಸಮಾರಂಭಕ್ಕೆ ಹೊರಗೆ ನಡೆದರೆ ಅವರಿಗೆ ಬರೋಬ್ಬರಿ 350 ಜನ ಭದ್ರತಾ ಸಿಬ್ಬಂದಿ ಮತ್ತು 34 ಬೆಂಗಾವಲು ವಾಹನಗಳು ಇರುತ್ತವೆ.

ಮುಖ್ಯಮಂತ್ರಿ ಪದವಿ ಸ್ವೀಕರಿಸಿದ ನಂತರ ತನ್ನ ಜೀವಕ್ಕೆ ತೊಂದರೆ ಇರುವುದರಿಂದ ಪ್ರಧಾನಮಂತ್ರಿ ಮತ್ತು ಮಾಜಿ ಪ್ರಧಾನಮಂತ್ರಿಗಳಿಗೆ ನೀಡುವ ವಿಶೇಷ ಭದ್ರತಾ ಪಡೆ (ಎಸ್.ಪಿ.ಜಿ) ಕೊಡಬೇಕೆಂದು ಕೇಳಿಕೊಂಡಿದ್ದರು ಆದರೆ ಕೇಂದ್ರ ಸರಕಾರ ಅವರ ಬೇಡಿಕೆಯನ್ನು ತಳ್ಳಿಹಾಕಿತ್ತು. ಈ ಭಾರೀ ಭದ್ರತಾ ಸಿಬ್ಬಂದಿ ಮತ್ತು ಬೆಂಗಾವಲು ವಾಹನಗಳ ಜೊತೆ ಮಾಯಾವತಿ ಹೊರಗೆ ನಡೆದರೆ ದಾರಿಯಲ್ಲಿ ಬರುವ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಬೇಕಾಗುತ್ತದೆ.

ಟ್ರಾಫಿಕ್ ಸಂಪೂರ್ಣ ಬಂದ್ ಆಗಿರುತ್ತದೆ. ಒಟ್ಟಿಗೆ ಮಾಯಾ ಪಡೆ ಬಂದು ಹೋಗುವ ತನಕ ಅಲ್ಲಿನ ಪ್ರದೇಶದಲ್ಲಿ ಹೆಚ್ಚು ಕಮ್ಮಿ ಸ್ವಯಂ ಘೋಷಿತ ಕರ್ಫ್ಯೂ. ಲಕ್ನೊ ನಗರ ಕಾಳಿದಾಸ ಮಾರ್ಗದಲ್ಲಿರುವ ತನ್ನ ಅಧಿಕೃತ ನಿವಾಸದ ಹೆಚ್ಚು ಕಮ್ಮಿ ಒಂದು ಕಿಲೋ ಮೀಟರ ವ್ಯಾಪ್ತಿಯಲ್ಲಿ ಬ್ಯಾರಿಕ್ಯಡ್ ಹಾಕಿರುತ್ತದೆ. ತಾನು ಅಧಿಕಾರ ಸ್ವೀಕರಿಸಿದ ನಂತರ ತನ್ನ ಅಧಿಕೃತ ನಿವಾಸದಲ್ಲಿ ಭಾರಿ ಬದಲಾವಣೆ ತಂದಿದ್ದಾರೆ. ಅವರ ಚೇಂಬರ್ ಅಂತು ದೊಡ್ಡ ಕೈಗಾರಿಕೋದ್ಯಮಿಗಳ ಚೇಂಬರ್ ತಾರಾ ಇದೆ.

ಇವರ ಈ ಭದ್ರತಾ ವ್ಯವಸ್ಥೆಗೆ ಜನರಿಂದ ಪ್ರತಿರೋಧ ತೋರಿಬಂದರೂ, ಅವರ ಭದ್ರತೆಯ ವಿಷಯದಲ್ಲಿ ನಾವು ಯಾವುದೇ ರಾಜಿ ಮಾಡಿಕೊಳ್ಳಲು ತಯಾರಿಲ್ಲ ಎಂದು ಭದ್ರತಾ ಅಧಿಕಾರಿಗಳು ಹೇಳುತ್ತಾರೆ.
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X