ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಲ್ಲೂರು ದೇವಸ್ಥಾನಕ್ಕೆ ಹುಸಿ ಬಾಂಬ್ ಬೆದರಿಕೆ

By Staff
|
Google Oneindia Kannada News

ಉಡುಪಿ, ನ. 24 : ಇತಿಹಾಸ ಪ್ರಸಿದ್ದ ಕೊಲ್ಲೂರು ಮುಕಾ೦ಬಿಕಾ ದೇವಸ್ಥಾನಕ್ಕೆ ಬಾಂಬ್ ಇಡಲಾಗಿದೆ ಎನ್ನುವ ಹುಸಿ ಬಾಂಬ್ ಕರೆಯಿಂದ ಕೆಲ ಕಾಲ ದೇವಸ್ಥಾನದಲ್ಲಿ ಆತಂಕ ವಾತಾವರಣ ಮನೆ ಮಾಡಿತ್ತು. ವಿಷಯ ತಿಳಿದ ತಕ್ಷಣ ಆಗಮಿಸಿದ ಪೊಲೀಸರು ದೇವಸ್ಥಾನದ ಒಳಗೆ ಮತ್ತು ಸುತ್ತ ಮುತ್ತ ಭಾರಿ ತಪಾಸಣೆ ನಡೆಸಿದರು. ನಂತರ ಇಂದೊಂದು ಹುಸಿ ಬಾಂಬ್ ಕರೆ ಎಂದು ತಿಳಿದಿದ್ದರಿಂದ ನಿಟ್ಟುಸಿರು ಬಿಡುವಂತಾಯಿತು.

ಮಂಗಳೂರಿನ ಪೋಲಿಸ್ ಕಂಟ್ರೋಲ್ ರೂಮ್ ಗೆ ಈ ಹುಸಿ ಕರೆ ಬಂದಿತ್ತು. ಕೂಡಲೇ ಈ ವಿಷಯವನ್ನು ಉಡುಪಿ ಪೋಲಿಸ್ ಕಂಟ್ರೋಲ್ ರೂಮ್ ಗೆ ತಿಳಿಸಿದರು. ಸುದ್ದಿ ತಿಳಿದ ತಕ್ಷಣ ಕಾರ್ಯೋನ್ಮುಖರಾದ ಪೊಲೀಸರು ದೇವಸ್ಥಾನದ ಎಲ್ಲಾ ಕಡೆ ಜಾಲಾಡಿಸಿದ ನಂತರ ಇದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದುಬಂದಿತು. ದೇವಸ್ಥಾನಕ್ಕೆ ಹೆಚ್ಚಿನ ಪೋಲಿಸ್ ಮತ್ತು ಶ್ವಾನದಳದ ಸೌಲಭ್ಯವನ್ನು ಸದ್ಯದಲ್ಲೇ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X