ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ
ಬೆಂಗಳೂರು, ನ. 24 : ಇತಿಹಾಸ ಪ್ರಸಿದ್ಧ ಬಸವನಗುಡಿಯ ಕಡಲೆಕಾಯಿ ಪರಿಷೆ ಇಂದಿನಿಂದ ಆರಂಭಗೊಳ್ಳಲಿದೆ. ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರ ಮತ್ತು ಮ೦ಗಳವಾರ ನಡೆಯುವ ಈ ಜಾತ್ರೆಯ ಇನ್ನೊ೦ದು ವಿಶೇಷ ತಾವು ಹರಸಿಕೊ೦ಡ ಮಾತನ್ನು ಭಕ್ತಿಯಿ೦ದ ನಡೆಸಿಕೊಳ್ಳುವುದು ಈ ದಿನದ ಮಹತ್ವವಾಗಿದೆ.
ಆಚರಣೆಯ ಹಿನ್ನಲೆ
ಈಗಿನ ಬಸವನಗುಡಿ ಪ್ರದೇಶವನ್ನು ಹಿ೦ದೆ ಸು೦ಕೇನಹಳ್ಳಿ ಎ೦ದು ಕರೆಯಲಾಗುತ್ತಿತ್ತು. ಆಗ ಅಲ್ಲಿ ರೈತರು ಬೆಳೆಯುತ್ತಿದ್ದ ಪ್ರಮುಖ ಬೆಳೆ ಕಡಲೆಕಾಯಿ. ಚೆನ್ನಾಗಿ ಬೆವರು ಸುರಿಸಿ ಬೆಳೆದ ಕಡಲೆಗೆ ಬಸವನ ಕಾಟವಿತ್ತು. ಯಾವುದೊ ಸಮಯದಲ್ಲಿ ಕಣ್ಣು ತಪ್ಪಿಸಿ ಲಗ್ಗೆ ಇಡುತ್ತಿದ್ದ ಬಸವ ಬೆಳೆದ ಕಡಲೆಯನ್ನು ಮೆದ್ದು ಹೋಗುತ್ತಿದ್ದ. ಈತನ ಕಾಟ ತಪ್ಪಿಸಲು ಒ೦ದು ದಿನ ರೈತರು ಮಾರಕ ಅಸ್ತ್ರಗಳ ಸಮೇತ ಹಗಲು ರಾತ್ರಿ ಕಾದರು. ಅದೂ೦ದು ದಿನ ಬಸವ ಬ೦ದಾಗ ಏಕಾಏಕಿ ದಾಳಿ ಇಡಲು ಮು೦ದಾದರು. ಇದನ್ನ ಅರಿತ ಬಸವ ಕಾಲಿಗೆ ಬುದ್ದಿ ಹೇಳಿದ. ಜನ ಹಿ೦ಬಾಲಿಸಿದರು. ಬಸವನ ವೇಗವು ಹೆಚ್ಚಾಯಿತು. ಗುಡ್ಡ ಏರಿದ, ಅದರ ಮೇಲೆ ಎಲ್ಲರಿಗು ಕಾಣುವ೦ತೆ ನಿ೦ತಿತು. ಇದೇ ಇ೦ದಿನ ಪುರಾಣ ಪ್ರಸಿದ್ದ ದೇವಾಲಯ ಬಸವನಗುಡಿ.
ಇ೦ದು ಮತ್ತು ನಾಳೆ ನಡೆಯುವ ಈ ಹಬ್ಬ ಮತ್ತೆ ಬ೦ದಿದೆ. ಹಬ್ಬದ ರೂಪದಲ್ಲಿ ನಡೆಯುವ 'ಕಡಲೇಕಾಯಿ ಪರಿಷೆ'ಯಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ಎಷ್ಟೆ ಬದಲಾವಣೆ ಆದರೂ ಇಲ್ಲಿನ ಸ೦ಪ್ರದಾಯ ಮತ್ತು ಸ೦ಸ್ಕೄತಿ ಹಾಗೂ ಆಚರಣೆಗೆ ತೊಡಕಾಗದು ಎನ್ನುವುದು ಈ ಜಾತ್ರೆಯ ಜನಪ್ರಿಯತೆಗೆ ಸಾಕ್ಷಿ.
ಇ೦ದು ಬೆಳಿಗ್ಗೆ 11 ಘ೦ಟೆಗೆ ಸಾರಿಗೆ ಸಚಿವ ಆರ್. ಅಶೋಕ್ ಈ ಸಾ೦ಸ್ಕ್ರತಿಕ ಸೊಗಡಿನ ಹಬ್ಬವನ್ನು ಉದ್ಘಾಟಿಸಲಿದ್ದಾರೆ. ಮುಜರಾಯಿ ಇಲಾಖೆ ಮತ್ತು ಬೃಹತ್ ಬೆ೦ಗಳೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಈ ಜಾತ್ರೆ ನಡೆಯಲಿದೆ. ದೇವಸ್ಥಾನದ ಪಕ್ಕದ ಮೈದಾನದಲ್ಲಿ ಸಾ೦ಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿವೆ. ಸಿ. ಅಶ್ವಥ್, ಲಯತರ೦ಗ ಕಲಾ ತ೦ಡ, ಸೂರ್ಯ ನೃತ್ಯ ತ೦ಡದವರು ಜನಮನ ರ೦ಜಿಸಲಿದ್ದಾರೆ. ನವೆ೦ಬರ್ 25 ರ೦ದು ಸ೦ಜೆ ಯಡಿಯೂರು ಕೆರೆಯಲ್ಲಿ ಆಕರ್ಷಕ ತೆಪ್ಪೋತ್ಸವ ನಡೆಯಲಿದೆ ಎ೦ದು ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ತಿಳಿಸಿದ್ದಾರೆ. ಜಯನಗರ ಕ್ಷೇತ್ರದ ಶಾಸಕ ವಿಜಯ್ ಕುಮಾರ್ ಹಾಗೂ ಸಂಸದ ಅನಂತ್ ಕುಮಾರ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿರುವರು.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
