ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಐಎಎಲ್ ಸಿಇಒ ಬ್ರೂನರ್ ರಾಜೀನಾಮೆ

By Staff
|
Google Oneindia Kannada News

ಬೆಂಗಳೂರು, ನ.22:ಕಳೆದ ಏಳು ವರ್ಷಗಳಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಸಿಇಒ ಆಗಿ ಸೇವೆ ಸಲ್ಲಿಸುತ್ತಿದ್ದ ಆಲ್ಬರ್ಟ್ ಬ್ರೂನರ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಖ್ಯ ನಿರ್ವಹಣಾ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಮಾರ್ಸೆಲ್ ಹಂಗರ್ ಬೂಹ್ಲರ್ (Marcel HungerbÜehler)

ಸಿಇಒ ಆಗಿ ಆಯ್ಕೆ ಆಗಿದ್ದಾರೆ. ರಾಜ್ಯ ವಿಧಾನಮಂಡಲದ ಜಂಟಿ ಸದಸ್ಯ ಸಮಿತಿಯು ಬಿಐಎಎಲ್ ನ ಕಳಪೆ ಕಾಮಗಾರಿ ಕುರಿತು ತನಿಖೆ ನಡೆಸುತ್ತಿರುವ ಕುರಿತು ಸಂದರ್ಭದಲ್ಲೇ ಬ್ರೂನರ್ ರಾಜೀನಾಮೆ ಹಲವು ಅನುಮಾನಗಳಿಗೆ ಆಸ್ಪದ ನೀಡಿದಂತಾಗಿದೆ. ನೂತನ ಸಿಇಒ ಬೂಹ್ಲರ್ ಅವರು ಮುಂದಿನ ವರ್ಷ ಫೆ.1ರಂದು ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಕಳೆದ ಎರಡು ವರ್ಷಗಳಿಂದ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರೂಪು ರೇಷೆಗಳನ್ನು ರಚಿಸಿದ್ದ ಬೂಹ್ಲರ್ ಅವರಿಗೆ ಈ ಕ್ಷೇತ್ರದಲ್ಲಿ ಸುಮಾರು 38 ವರ್ಷಗಳ ಅನುಭವವಿದೆ.

ಬಿಐಎಎಲ್ ಗೂ ಮೊದಲು ಸ್ವಿಸ್ ಏರ್ ನಲ್ಲಿ ಕೆಲಸ ನಿರ್ವಹಿಸಿದ್ದಾರೆ. ಬೈ ಬೈ ಬ್ರೂನರ್: 2002 ರಲ್ಲಿ ಬಿಐಎಎಲ್ ನ ಚುಕ್ಕಾಣಿ ಹಿಡಿದ ಬ್ರೂನರ್ ಅಂತೂ ಇಂತೂ ಜುಲೈ 2005 ರಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ನಾಂದಿ ಹಾಡಿದರು. ಮಾರ್ಚ್ 2008 ರಲ್ಲಿ ವಾಣಿಜ್ಯೋದ್ದೇಶಗಳಿಗೆ ಏರ್ ಪೊರ್ಟ್ ಅನ್ನು ಮುಕ್ತಗೊಳಿಸಲಾಯಿತು. "ಮೂರು ವರ್ಷಗಳ ಗುತ್ತಿಗೆ ಆಧಾರವಾಗಿ ಕೆಲಸ ನಿರ್ವಹಿಸಲು ಮಾತ್ರ ಇಲ್ಲಿಗೆ ಬಂದೆ. ಸುಮಾರು ಏಳು ವರ್ಷಗಳ ಕಾಲ ಬಿಐಎಎಲ್ ನಲ್ಲಿ ಕಾರ್ಯ ನಿರ್ವಹಿಸಿದ ತೃಪ್ತಿಯಿದೆ. ವ್ಯಾಪಾರಿಗಳು, ರಾಜಕಾರಣಿಗಳು ಹಾಗೂ ಸಾರ್ವಜನಿಕರ ದೂರು ದುಮ್ಮಾನದ ನಡುವೆ ಕೂಡ ಸಮರ್ಪಕವಾಗಿ ಬಿಐಎಎಲ್ ಅನ್ನು ಮುನ್ನೆಡೆಸಿದ ತೃಪ್ತಿಯಿದೆ. ಈ ಏಳು ವರ್ಷದಲ್ಲಿ ಬೆಂಗಳೂರು ನನ್ನ ಮನೆಯಾಗಿತ್ತು ಎಂಬುದನ್ನು ನಾನು ಮರೆಯಲಾರೆ" ಎಂದು ಅಲ್ಬರ್ಟ್ ಬ್ರೂನರ್ ಭಾವುಕರಾಗಿ ಸುದ್ದಿಗಾರರಿಗೆ ಹೇಳಿದರು. (ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X