ಮಾಲೇಗಾಂವ್ ಸ್ಫೋಟ, ಶ್ಯಾಮ್ ಆಪ್ಟೆ ವಿಚಾರಣೆ
ಪುಣೆ, ನ. 23 : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ನಾಯಕರನ್ನು ಹತ್ಯೆಗೈಯಲು ಸಂಚು ರೂಪಿಸಿದ್ದಾರೆ ಎನ್ನಲಾದ ನಗರದ ಆರ್ಎಸ್ಎಸ್ ಮುಖಂಡ ಶ್ಯಾಮ್ ಆಪ್ಟೆ ಅವರನ್ನು ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳದ ಮುಖ್ಯಸ್ಥ ಹೇಮಂತ್ ಕರ್ಕರೆ ವಿಚಾರಣೆ ನಡೆಸಿದ್ದಾರೆ.
ಮಾಲೇಗಾಂವ್ ಸ್ಫೋಟ ದಿನದಿಂದ ದಿನಕ್ಕೆ ವಿಚಿತ್ರ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಇಂದು ನಡೆಸಿ ವಿಚಾರಣೆಯಿಂದ ಪ್ರಕರಣ ಇನ್ನಷ್ಟು ಮಹತ್ವ ಪಡೆದುಕೊಂಡಿದೆ. ಇತ್ತೀಚೆಗೆ ಉತ್ತರ ಪ್ರದೇಶದ ದಯಾನಂದ ಪಾಂಡೆ ಅವರ ಮಂಪರು ಪರೀಕ್ಷೆಗೆ ಒಳಪಡಿಸಿದಾಗ ಈ ಆಘಾತಕಾರಿ ವಿಷಯ ಹೊರಬಿದ್ದಿತ್ತು. ದಯಾನಂದ ಪಾಂಡೆ, ಕರ್ನಲ್ ಶ್ರೀಕಾಂತ್ ಪುರೋಹಿತ್ ಹಾಗೂ ಪುಣೆಯ ಶ್ಯಾಮ್ ಆಪ್ಟೆ ಸೇರಿಕೊಂಡು ಆರ್ಎಸ್ಎಸ್ ನ ಹಿರಿಯ ಮುಖಂಡರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು ಎನ್ನುವ ಸತ್ಯವನ್ನು ಪಾಂಡೆ ಬಹಿರಂಗಪಡಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
