ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ Vs ಇಂಗ್ಲೆಂಡ್ 4ನೇ ಏಕದಿನ ಪಂದ್ಯ

By Staff
|
Google Oneindia Kannada News

ಬೆಂಗಳೂರು, ನ. 23 : ನಗರದಲ್ಲಿ ಕ್ರಿಕೆಟ್ ಜ್ವರ ಮೇರೆ ಮೀರಿದೆ. ಮೂರು ಪಂದ್ಯಗಳನ್ನು ಗೆದ್ದು ಬೀಗುತ್ತಿರುವ ಭಾರತ ತಂಡ ಭಾನುವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಲ್ಕನೇ ಹೊನಲು ಬೆಳಕಿನ ಪಂದ್ಯ ಆಡಲಿದೆ. ಬಂಗಾಲ ಕೊಲ್ಲಿಯ ಪೂರ್ವ ಕರಾವಳಿ ಹಾಗೂ ದಕ್ಷಿಣ ಕನ್ನಡದ ಮೂಲಕ ದಟ್ಟವಾದ ಮೋಡಗಳು ವಾಯುವ್ಯ ದಿಕ್ಕಿಗೆ ಚಲಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಮುಂದಿನ 48 ಗಂಟೆಗಳ ಕಾಲ ಮಳೆ ಬೀಳುವ ಸಾಧ್ಯತೆಗಳಿರುವುದರಿಂದ ಪಂದ್ಯ ನಡೆಯುವುದು ಅನುಮಾನವಾಗಿದೆ.

ಭಾನುವಾರವಾದ ಹಿನ್ನೆಲೆಯಲ್ಲಿ ಕ್ರಿಕೆಟ್ ಪ್ರಿಯರೆಲ್ಲರೂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಮಳೆರಾಯನ ಮುನಿಸು ಮಾತ್ರ ಕ್ರಿಕೆಟ್ ಅಭಿಮಾನಿಗಳ ಆಸೆಗೆ ತಣ್ಣೀರೆರಚಲು ಸಿದ್ಧನಾಗಿದ್ದಾನೆ. ಕಾರ್ಮೋಡಗಳು ನೆತ್ತಿಯ ಮೇಲೆ ತೇಲಾಡುತ್ತಿರುವುದರಿಂದ ಪಂದ್ಯ ನಡೆಯುವುದು ಸಂಶಯವೇ ಆಗಿದೆ.

ರಾಜ್ ಕೋಟ್, ಕಾನ್ಪುರ್, ಇಂದೋರ್ ನಲ್ಲಿ ನಡೆದ ಮೂರು ಪಂದ್ಯಗಳಲ್ಲಿ ಧೋನಿ ನೇತೃತ್ವದ ಭಾರತ ತಂಡ, ಇಂಗ್ಲಿಷ್ ತಂಡವನ್ನು ಬಗ್ಗುಬಡಿದಿದೆ. ನಗರದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ತನ್ನ ಗೆಲುವಿನ ಅಭಿಮಾನವನ್ನು ಮುಂದುವೆರೆಸಲು ತುದಿಗಾಲ ಮೇಲೆ ನಿಂತಿದೆ. ತಮ್ಮ ನೆಚ್ಚಿನ ಆಟಗಾರರ ಆಟವನ್ನು ಸವಿಯಲು ಪ್ರೇಕ್ಷಕರು ಟಿಕೆಟ್ ಗಳನ್ನು ದುಪ್ಪಟ್ಟು ಬೆಲೆ ತೆತ್ತು ಕ್ರೀಡಾಂಗಣದತ್ತ ಧಾವಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಈ ಪಂದ್ಯದಲ್ಲಿ ಕಣಕ್ಕಿಳಿಯುತ್ತಿರುವುದು ಇಂದಿನ ಪಂದ್ಯದ ಪ್ರಮುಖ ಆಕರ್ಷಣೆಯಾಗಿದೆ.

(ದಟ್ಸ್ ಕನ್ನಡ ಕ್ರೀಡಾವಾರ್ತೆ)

4th ODI: Ind Vs Eng: Ball by Ball, Scorecard
ಭಾರತ Vs ಇಂಗ್ಲೆಂಡ್, 4ನೇ ಏಕದಿನ ಪಂದ್ಯ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X