ಗ್ರಾಮೀಣ ಉದ್ಯೋಗ : ನ್ಯಾಯಾಂಗಕ್ಕೆ ರಾಜ್ಯದ ಸಾಥ್

KG Balakrishnan, Chief justice of India
ಬೆಂಗಳೂರು, ನ. 22 : ಶೈಕ್ಷಣಿಕ ಮತ್ತು ಔದ್ಯೋಗಿಕ ಹಕ್ಕನ್ನು ಭಾರತದ ಸಂವಿಧಾನದಲ್ಲಿ ನೀಡಲಾಗಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಇದು ಇನ್ನೂ ಕನಸಾಗಿಯೇ ಉಳಿದಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ವಿಷಾದ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕುರಿತಂತೆ ನಗರದಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ವಿಚಾರಸಂಕಿರಣವನ್ನು ಉದ್ದೇಶಿಸಿ ಅವರು ಶನಿವಾರ ಮಾತನಾಡುತ್ತಿದ್ದರು. ಈ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇರಿಸಿರುವ ನ್ಯಾಯಾಂಗ, ರಾಷ್ಟ್ರದ ಗ್ರಾಮೀಣ ಪ್ರದೇಶಗಳಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕುರಿತಂತೆ ಜಾಗೃತಿ ಮೂಡಿಸಲು ರಾಜ್ಯದೊಡನೆ ಕೈಜೋಡಿಸಿದೆ.

ಈ ಯೋಜನೆಯನ್ನು ನಿಯತ್ತಾಗಿ ಕಾರ್ಯಗತಕ್ಕೆ ತಂದರೆ ಗ್ರಾಮೀಣ ನಿರುದ್ಯೋಗ ನಿವಾರಣೆಯಾಗುವುದಲ್ಲದೆ, ಗ್ರಾಮೀಣ ಜನತೆಗೆ ಬಲ ಬಂದಂತಾಗುತ್ತದೆ ಎಂದು ನ್ಯಾಯಮೂರ್ತಿ ಬಾಲಕೃಷ್ಣನ್ ಅಭಿಪ್ರಾಯಪಟ್ಟರು. ಸಮೀಕ್ಷೆ ಪ್ರಕಾರ, ಅನೇಕ ರಾಜ್ಯಗಳಲ್ಲಿ ಈ ಯೋಜನೆ ಸರಿಯಾಗಿ ಕಾರ್ಯರೂಪಕ್ಕೆ ಬಂದಿಲ್ಲ. ಚತ್ತೀಸ್ ಘಡದಲ್ಲಿ ಕೇವಲ ಶೇ.27ರಷ್ಟು ಜಾರಿಗೆ ಬಂದಿದ್ದರೆ, ರಾಜಸ್ತಾನದಲ್ಲಿ ಇನ್ನೂ ಕಾರ್ಯರೂಪಕ್ಕೆ ತರಬೇಕಾಗಿದೆ ಎಂದು ಹೇಳಿದರು.

ಮಹತ್ವದ ಯೋಜನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೆ ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಯುವಜನತೆ ವಲಸೆ ಬರುವುದು ತಪ್ಪುತ್ತದೆ ಮತ್ತು ದೈನಂದಿನ ಜೀವನಕ್ಕಾಗಿ ಅಪರಾಧಗಳಲ್ಲಿ ನಿರತರಾಗುವುದು ಕಡಿಮೆಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು, ಗ್ರಾಮೀಣ ಉದ್ಯೋಗ ಯೋಜನೆ ಪೂರ್ಣರೂಪದಲ್ಲಿ ಜಾರಿಗೆ ತರಬೇಕಾದರೆ ಮತ್ತು ಬಡವರು ಯೋಜನೆಯ ಲಾಭಪಡೆಯಬೇಕಾದರೆ ಪೂರ್ಣಾವಧಿಯ ಅಧಿಕಾರಿಗಳ ಮತ್ತು ತಾಂತ್ರಿಕ ಸಿಬ್ಬಂದಿಯ ಅಗತ್ಯವಿದೆ ಎಂದರು. ಇದಕ್ಕಾಗಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ನುರಿತ ಸಿಬ್ಬಂದಿಯನ್ನು ತಯಾರು ಮಾಡಬೇಕು ಮತ್ತು ಪಂಚಾಯತ್ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂದು ನುಡಿದರು.

ಮಾಹಿತಿ ತಂತ್ರಜ್ಞಾನದ ಬಳಕೆಯಿಂದ ಯೋಜನೆಯನ್ನು ಅತ್ಯಂತ ವ್ಯವಸ್ಥಿತವಾಗಿ ಕಾರ್ಯರೂಪಕ್ಕೆ ತರಬಹುದು. ಇದಕ್ಕಾಗಿ ಸರ್ಕಾರೇತರ ಸಂಸ್ಥೆ, ಯುವ ಕ್ಲಬ್, ಮಹಿಳಾ ಮಂಡಳ ಮುಂತಾದ ಸಂಸ್ಥೆಗಳ ಸಹಾಯವನ್ನು ಪಡೆಯಬಹುದು. ಹೆಚ್ಚಿನ ಜನರನ್ನು ಆಕರ್ಷಿಸಲು ವೇತನ ಪರಿಷ್ಕರಿಸುವ ಅಗತ್ಯವೂ ಇದೆ ಎಂದು ಯಡಿಯೂರಪ್ಪ ತಿಳಿಸಿದರು.

ರಾಜ್ಯದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪಿ.ಡಿ. ದಿನಕರನ್ ಅವರು ನಂತರ ಮಾತನಾಡಿ, ರಾಜ್ಯದಲ್ಲಿರುವ ಇತ್ಯರ್ಥವಾಗದ ಕೇಸುಗಳ ಬಗ್ಗೆ ವಿವರ ನೀಡಿದರು. ಬಿಹಾರ ನೆರೆ ಸಂತ್ರಸ್ತರಿಗಾಗಿ ರಾಜ್ಯದ ನ್ಯಾಯಾಧೀಶರು, ನ್ಯಾಯವಾದಿಗಳು ಮತ್ತಿತರ ನ್ಯಾಯಾಂಗದ ಸಿಬ್ಬಂದಿಗಳಿಂದ ಸಂಗ್ರಹಿಸಲಾಗಿರುವ 31 ಲಕ್ಷ ರು.ಗಳನ್ನು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಹಸ್ತಾಂತರಿಸಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+